ದಾವಣಗೆರೆ, ಜ. 5 – ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವಯೋಸಹಜ ಕಾರಣದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಬಹುಬೇಗ ಗುಣಮುಖರಾಗಲಿ ಹಾಗೂ ಭಗವಂತನು ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ ದಯಪಾಲಿಸಲೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದಿಂದ ಶ್ರೀ ಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಅಭಿಷೇಕ, ಶಿವ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್, ಸಮಾಜದ ಹಿರಿಯ ಮುಖಂಡರಾದ ಕಿರುವಾಡಿ ಗಿರಿಜಮ್ಮ, ವೃಷಭೇಂದ್ರಪ್ಪ, ಕಿರುವಾಡಿ ಸೋಮಣ್ಣ, ರಾಜ್ಯ ಸಮಿತಿ ನಿರ್ದೇಶಕರಾದ ಸಂದೀಪ್ ಅಣಬೇರು, ಜಿಲ್ಲಾ ಸಮಿತಿಯ ಕುರ್ಕಿ ಮಂಜುನಾಥ್, ವೇದಮೂರ್ತಿ ಶಾಮನೂರು, ಕಂಚಿಕೆರೆ ಮಹೇಶ್, ಬೆಳಗಾವಿ ಬಸವರಾಜಪ್ಪ, ನಿರ್ಮಲ ಸುಭಾಷ್, ವಿಜಯ ಬಸವರಾಜ್, ಅಜ್ಜಂಪುರ ಸುಧಾ, ನೀತ ನಂದೀಶ್, ಮಾಗಾನಹಳ್ಳಿ ಗಿರೀಶ್, ಬುಳ್ಳಾಪುರದ ವಿಶ್ವನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವಿನಾಶ್ ಬಸವರಾಜ್, ಮಹಿಳಾ ಘಟಕದ ಸದಸ್ಯರಾದ ಸುಷ್ಮಾ ಪಾಟೀಲ್, ದ್ರಾಕ್ಷಾಯಣಮ್ಮ, ದೀಪಾ ದೇವರಾಜ್, ಮತ್ತು ನಗರ ಘಟಕದ ಸದಸ್ಯರಾದ ಸಿದ್ದಲಿಂಗ ಸ್ವಾಮಿ, ನಿಧಿರಾಜ್ ಐನಳ್ಳಿ ಮತ್ತಿತರರು ಉಪಸ್ಥಿತರಿದ್ದರು.