ದಾವಣಗೆರೆ, ಜ. 5- ಭಾರತ ವಿಕಾಸ ಪರಿಷದ್ ಗೌತಮ ಶಾಖೆ ವತಿಯಿಂದ ನಗರದ ಚೌಕಿಪೇಟೆಯ ಶ್ರೀ ಗುರು ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಶ್ರೀ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮದ ಸಂದರ್ಭದಲ್ಲಿ ಜ್ಞಾನಯೋಗಿ ಲಿಂ. ಶ್ರೀ ಸಿದ್ದೇಶ್ವರ ಸ್ವಾಮಿಗಳವರಿಗೆ ದೀಪ ಬೆಳಗಿಸುವ ಮೂಲಕ ದೀಪ ನಮನದೊಂದಿಗೆ ಭಕ್ತಿ ಸಮರ್ಪಣೆಯ `ಗುರು ನಮನ’ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಭಾರತ ವಿಕಾಸ ಪರಿಷದ್ ಅಧ್ಯಕ್ಷ ಅಜ್ಜಂಪುರ ಶೆಟ್ರು ವಿಜಯಕುಮಾರ್, ಕಾರ್ಯದರ್ಶಿ ಮಧುಕರ್, ಬೆಳಗಾವಿ ಬಸವರಾಜಪ್ಪ, ವಿಶ್ವನಾಥ್, ಗುರುಬಸವರಾಜ್, ಬುಳ್ಳಾಪುರ ರವಿ, ಹಂಸಬಾವಿ ಕೊಟ್ರೇಶ್, ಶಾಂತಮ್ಮ ತಿಪ್ಪಣ್ಣ, ನೇತ್ರಾ ಮಧುಕರ್, ಸುರೇಶ್, ಪ್ರದೀಪ್, ಪುರಾಣ ಸೇವಾ ಸಮಿತಿ ಮೃತ್ಯುಂಜಯ ಅಜ್ಜಂಪುರ ಶೆಟ್ರು, ರುದ್ರೇಶ್, ಪಂಚಾಕ್ಷರಪ್ಪ, ಚನ್ನವೀರಯ್ಯ ಶಾಸ್ತ್ರಿಗಳು, ಶಿವಾನಂದ ಗುರೂಜಿ ಉಪಸ್ಥಿತರಿದ್ದರು. ಶೀಲಾನಾಯಕ್ ಸಂಗೀತ ಸೇವೆ ನಡೆಸಿಕೊಟ್ಟರು.