ಕೋರೆಂಗಾವ್ ಮರ್ಯಾದೆಗಾಗಿ ನಡೆದ ಏಕೈಕ ಯುದ್ಧ

ಕೋರೆಂಗಾವ್ ಮರ್ಯಾದೆಗಾಗಿ ನಡೆದ ಏಕೈಕ ಯುದ್ಧ

ಹೊನ್ನಾಳಿ ವಿಜಯೋತ್ಸವದಲ್ಲಿ ಎ.ಡಿ ಈಶ್ವರಪ್ಪ

ಹೊನ್ನಾಳಿ,ಜ.3- ಭೀಮ ಕೋರೆಂ ಗಾವ್ ಯುದ್ಧವು ಐದು ನೂರು ಜನರ ಒಗ್ಗ ಟ್ಟಿನಿಂದ ಕೂಡಿದ, ವಿಶ್ವದಲ್ಲೇ   ಮರ್ಯಾ ದೆಗಾಗಿ ನಡೆದ ಏಕೈಕ ಯುದ್ಧವಾಗಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ ಈಶ್ವರಪ್ಪ ಹೇಳಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ  207ನೇ ಪೇಶ್ವೆಯರ ವಿರುದ್ಧ ಗೆದ್ದ ಕೋರೆಂಗಾವ್ ವಿಜಯೋತ್ಸವ ನಿಮಿತ್ತ ಕ್ಯಾಂಡಲ್ ಹಚ್ಚಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

1818  ಜನವರಿ 1 ರಂದು 
14 ಸಾವಿರ   ಪೇಶ್ವೆಗಳ ಗುಂಪನ್ನು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ನಡೆದ ಯುದ್ಧದಲ್ಲಿ ಮಣಿಸುವ ಮೂಲಕ ನಮ್ಮ ಪೂರ್ವಜರು ಸಿಂಹಗಳೆಂದು ಸಾಬೀತು ಪಡಿಸಿದ್ದಾರೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ತಾಲ್ಲೂಕು ಅಧ್ಯಕ್ಷ ಕೆ.ಒ ಹನುಮಂತಪ್ಪ, ಪದಾಧಿಕಾರಿಗಳಾದ ಅರಕೆರೆ ಕೃಷ್ಣಪ್ಪ, ಲೋಕೇಶ್, ನಜೀರ್, ಚೆನ್ನೇಶ್, ರಾಮಣ್ಣ, ನಾಗರಾಜ್ ಕಲ್ಕೇರಿ, ಪ್ರಭು, ಗೀತಾ, ಸಾವಿತ್ರಮ್ಮ, ಲಕ್ಷ್ಮಿ ಸೇರಿದಂತೆ ಇನ್ನಿತರರಿದ್ದರು.

error: Content is protected !!