ಬಾಪೂಜಿ ಎಂ.ಬಿ.ಎ ಕಾಲೇಜು ಸಭಾಂಗಣದ ವೇದಿಕೆ 2 ರಲ್ಲಿ ಜಾನಪದ ನೃತ್ಯ ಸ್ಪರ್ಧೆಗಳು ನಡೆದವು. ವಿವಿಧ ಪದವಿ ಪೂರ್ವ, ಪದವಿ, ಸ್ನಾತಕೋತ್ತರ 31 ಜಿಲ್ಲೆಗಳ ಜಾನಪದ ಗೀತೆಗಳನ್ನು ಹಾಡುವ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದವು. ಶಿವಮೊಗ್ಗ ಜಿಲ್ಲೆಯ ತಂಡ ಜೇನು ಕುರುಬರ ಪದಗಳ ಹಾಡನ್ನು ಹಾಡಿದರು.
ಈ ವೇಳೆ ಮುಖ್ಯಅತಿಥಿಗಳಾಗಿ ಅಪ್ಪಗೆರೆ ತಿಮ್ಮರಾಜ್, ಪಿಚ್ಚಳ್ಳಿ ಶ್ರೀನಿವಾಸ್, ಸುನೀತ ಗಣೇಶ್, ಅರ್ಜುನ ಪರುಸಪ್ಪ, ಡಾ. ಸ್ವಾಮಿ ತ್ರಿಭುವನಂದ, ಪುಷ್ಪ, ಉಷಾ, ಶ್ವೇತಾ ಪಟೇಲ್, ದಯಾನಂದ, ಭಾಗ್ಯಲಕ್ಷ್ಮಿ ಸೊನಾಲಿಕ ಉಪಸ್ಥಿತರಿದ್ದರು.
ವೇದಿಕೆ 5ರಲ್ಲಿ ನಡೆದ ಕಥೆ ಬರೆಯುವ ಸ್ಪರ್ಧೆಯಲ್ಲಿ ಇಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಕಥೆಗಳನ್ನು ವಿದ್ಯಾರ್ಥಿಗಳು ಬರೆದರು. ಕಥೆಯ ವಿಷಯ `ಭವಿಷ್ಯದ ಭಾರತವನ್ನು ಮಹಾಶಕ್ತಿಯಾಗಿ ಕಾಣಲು ನನ್ನ ದೃಷ್ಟಿಕೋನ’ ಎಂಬ ವಿಷಯದ ಕುರಿತು ಕಥೆ ಬರೆಸಲಾಯಿತು.
ತೀರ್ಪುಗಾರರು ಡಾ. ನಾಗರತ್ನ ಕೆ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ, ಹರಿಹರ ವಿಶ್ರಾಂತ ಸಹಪ್ರಾಧ್ಯಾಪಕ ಡಾ. ನಿರಂಜನ್‍ಮೂರ್ತಿ ಬಿ.ಎಂ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಅನ್ನಪೂರ್ಣ ಪಟೇಲ್, ಸುಮತಿ ಜಯಪ್ಪ, ಸುಭಾನ್ ಸಾಬ್, ಡಾ. ಸಿದ್ದೇಶ್ ಉಪಸ್ಥಿತರಿದ್ದರು.