ಕೋಳಿ ಜೂಜಾಟದ ಸಂಕಷ್ಟ ಅನಾವರಣಗೊಳಿಸಿದ ಗೀತೆ

ಕೋಳಿ ಜೂಜಾಟದ ಸಂಕಷ್ಟ ಅನಾವರಣಗೊಳಿಸಿದ ಗೀತೆ

ಯುವ ಜನೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲಾ ತಂಡ, ಕೋಳಿ ಜೂಜಾಟ ಪಂದ್ಯದ ಕುರಿತು ಜಾನಪದ ಗೀತೆಯನ್ನು ನೃತ್ಯದೊಂದಿಗೆ ಪ್ರದರ್ಶಿಸಿದರು. ಕೋಲಾರ ಜಿಲ್ಲೆ ಸೇರಿದಂತೆ ಆಂಧ್ರ ಗಡಿ ಭಾಗದಲ್ಲಿ ಪ್ರಚಲಿತ ಇರುವ ಕೋಳಿ ಪಂದ್ಯ ಗ್ರಾಮೀಣ ಭಾಗದಲ್ಲಿನ ಮೋಜಿನ ಆಟ ವಾಗಿದೆ. ಇದರಲ್ಲಿ ಗ್ರಾಮೀಣ ಪುರುಷರು  ಹಣ, ಬಂಗಾರಗ ಳನ್ನು ಪಣದಲ್ಲಿ ಇಟ್ಟು ಸೋತು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದರಿಂದ ಬಾಧಿತವಾದ ಹೆಣ್ಣು ಮಗಳು ತನ್ನ ಗಂಡನಿಗೆ ಕೋಳಿ ಪಂದ್ಯ ಆಡದಂತೆ,  ವಿವಿಧ ರೂಪಕಗಳಲ್ಲಿ ಎಚ್ಚರಿಸುತ್ತಾಳೆ. 

error: Content is protected !!