ದಾವಣಗೆರೆ, ಜ. 5- ದೇಶದ ಅಭಿವೃದ್ಧಿಯಲ್ಲಿ ಪುರುಷರಷ್ಟೇ ಮಹಿಳೆಯರ ಕೊಡುಗೆ ಅನನ್ಯವಾದದು ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.
ರಾಜ್ಯ ಮಟ್ಟದ ಯುವಜನೊತ್ಸವದ ಅಂಗವಾಗಿ ಭಾನುವಾರ ದಾವಣಗೆರೆ ನಗರದ ದೃಶ್ಯ ಕಲಾ ಮಹಾವಿದ್ಯಾಲಯದ ವೇದಿಕೆ-7 ರಲ್ಲಿ ಆಯೋಜಿಸಲಾಗಿದ್ದ ಘೋಷಣಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಮನೆಗೆಲಸ ಹಾಗೂ ಮಕ್ಕಳ ಲಾಲನೆ ಪಾಲನೆಗೆ ಮಾತ್ರ ಸೀಮಿತವಲ್ಲ. ದೇಶದ ಅಭಿವೃದ್ಧಿಯಲ್ಲೂ ಮಹತ್ತರ ಪಾತ್ರ ವಹಿಸಿದ್ದಾರೆ. ಯುವಜನೋತ್ಸವದಲ್ಲಿ ಮಹಿಳಾ ಸಶಕ್ತೀಕರಣ ಕುರಿತು ಘೋಷಣಾ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಉತ್ತಮವಾದ ಫಲಿತಾಂಶ ಹಾಗೂ ವಿಚಾರಗಳು ಮೂಡಿಬರಲಿ ಎಂದು ಶಾಸಕ ಹರೀಶ್ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಉಪನ್ಯಾಸಕರಾದ ರಾಜೇಶ್ವರಿ, ಯಜ್ಞಶ್ರೀ, ಎಸ್.ಕೆ.ಪವಾರ್ ತೀರ್ಪುಗಾರ ರಾಗಿ ಹಾಗೂ ಮಹೇಶ್ ದೊಡ್ಡಮನಿ ಮತ್ತು ನಾಗ ರಾಜ್ ಎಸ್ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಉದ್ಘಾಟನಾ ಸಮಾ ರಂಭದಲ್ಲಿ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.