ಕೊಂಡಜ್ಜಿ ಪಿಎಸಿಎಸ್ ಚುನಾವಣೆ ನಿಖಲ್ ಸೇರಿ 6 ಜನ ಅವಿರೋಧ ಆಯ್ಕೆ

ಕೊಂಡಜ್ಜಿ ಪಿಎಸಿಎಸ್ ಚುನಾವಣೆ   ನಿಖಲ್ ಸೇರಿ 6 ಜನ ಅವಿರೋಧ ಆಯ್ಕೆ

ಮಲೇಬೆನ್ನೂರು, ಜ.5- ಕೊಂಡಜ್ಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಸಾಲಗಾರರಲ್ಲದ ಕ್ಷೇತ್ರದಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಸೇರಿ 6 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಲಗಾರರ ಕ್ಷೇತ್ರದಿಂದ ಎಸ್ಸಿ ವರ್ಗದಿಂದ ಹೆಚ್.ಹನುಮಂತಪ್ಪ, ಎಸ್ಟಿ ವರ್ಗದಿಂದ ಮೃತ್ಯುಂಜಯ, ಬಿಸಿಎಂ `ಎ’ ವರ್ಗದಿಂದ ವೈ.ಹಾಲಪ್ಪ,
ಮಹಿಳಾ ಮೀಸಲು ವರ್ಗದಿಂದ ಸೌಭಾಗ್ಯಮ್ಮ ನಾಗರಾಜಪ್ಪ ಮತ್ತು ಅಂಜಿನಮ್ಮ ಮಹಾಂತೇಶ್ ಇವರುಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 6 ಸ್ಥಾನಗಳಿಗೆ ಇದೇ ದಿನಾಂಕ 11ಕ್ಕೆ ಚುನಾವಣೆ ನಡೆಯಲಿದೆ.

error: Content is protected !!