ಒಂದು ಅವಿರೋಧ ಆಯ್ಕೆ
ಮಲೇಬೆನ್ನೂರು, ಜ.5- ಜಿಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಜನ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ವರ್ಗದ ಜಿಗಳಿಯ ಎಕ್ಕೆಗೊಂದಿ ರುದ್ರಗೌಡ, ಜಿ.ಬೇವಿನಹಳ್ಳಿಯ ಜಿ.ಎಸ್.ಶಿವರಾಜ್, ಹಳ್ಳಿಹಾಳ್‌ನ ಕೆ.ಎಸ್.ವೀರನಗೌಡ, ತಿಮ್ಮನಗೌಡ, ಹೆಚ್.ಎಸ್.ಉಮೇಶ್, ಎಸ್ಸಿ
ವರ್ಗದಿಂದ ಹಳ್ಳಿಹಾಳ್ ಎ.ಕೆ.ಬಸವರಾಜ್, ಎಸ್ಟಿ ವರ್ಗದಿಂದ ಜಿಗಳಿಯ ಪುಟ್ಟಣ್ಣರ ಬಸವರಾಜ್, ಬಿಸಿಎಂ `ಎ’ ವರ್ಗದಿಂದ ಜಿಗಳಿಯ ಡಿ.ಹೆಚ್.ಮಂಜುನಾಥ್, ಬಿಸಿಎಂ `ಬಿ’ ವರ್ಗದಿಂದ ಜಿಗಳಿಯ ಜಿ.ಪಿ.ಹನುಮಗೌಡ, ಮಹಿಳಾ ಮೀಸಲು ವರ್ಗದಿಂದ ಜಿಗಳಿಯ ಜಿ.ಎಂ.ಕುಸುಮಮ್ಮ, ಹಳ್ಳಿಹಾಳ್‌ನ ಎಸ್.ವಿ.ಕುಸುಮ ಇವರುಗಳು ಚುನಾಯಿತರಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಶ್ರೀಮತಿ ರತ್ನಮ್ಮ ಜಿ.ಆನಂದಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.