ಡಾ. ಎ.ಬಿ. ರಾಮಚಂದ್ರಪ್ಪ ಅವರಿಗೆ ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ

ಡಾ. ಎ.ಬಿ. ರಾಮಚಂದ್ರಪ್ಪ ಅವರಿಗೆ ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ

ಮಲೇಬೆನ್ನೂರು, ಜ. 5 – ಬೆಂಗಳೂರಿನ ಯಲಹಂಕ ಸಮೀಪದ ಬಾಗಲೂರು ವಿ.ಜೆ. ಇಂಟರ್‌ನ್ಯಾಷನಲ್‌ ಶಾಲಾ ಮೈದಾನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ದಿನಾಚರಣೆ ಹಾಗೂ ವೈಚಾರಿಕ ದಿನಾಚರಣೆ ಮತ್ತು ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆದ ಡಾ. ಎ.ಬಿ. ರಾಮಚಂದ್ರಪ್ಪ ಅವರನ್ನು ಸಂಘಟನಾತ್ಮಕ ಸೇವೆಗಾಗಿ ರಾಜ್ಯಮಟ್ಟದ ಜೀವನ ಸಾಧನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಿಎಂ. ಸಲಹೆಗಾರ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ.ಆರ್‌. ಪಾಟೀಲ್‌, ವಿಧಾನ ಪರಿಷತ್‌ ಸದಸ್ಯೆ ಶ್ರೀಮತಿ ಉಮಾಶ್ರೀ ಬಂಡಾಯ ಸಾಹಿತಿ ಕೆ. ಷರೀಫಾ, ಮಂಡ್ಯ ವಿವಿಯ ಕುಲಪತಿ ಡಾ. ಶಿವ ಚಿತ್ತಪ್ಪ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಹುಲಿಕಲ್‌ ನಟರಾಜ್‌ ಮತ್ತಿತರರು ಈ ಕಾರ್ಯಕ್ರಮದಲ್ಲಿದ್ದರು.

error: Content is protected !!