ದಾವಣಗೆರೆ, ಜ.5- ನಗರದ ಪ್ರತಿಷ್ಟಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕಿನ ಚುನಾವಣೆಯಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕರುಗಳಾಗಿದ್ದ ಆರ್.ಎಲ್.ಪ್ರಭಾಕರ್ ಮತ್ತು ಆರ್.ಜಿ.ಶ್ರೀನಿವಾಸ ಮೂರ್ತಿ ಅವರುಗಳ ನೇತೃತ್ವದ ಗುಂಪಿಗೆ ಭರ್ಜರಿ ಜಯ ಲಭಿಸಿದೆ.
ಆರ್.ಎಲ್. ಪ್ರಭಾಕರ್ ಮತ್ತು ಆರ್.ಜಿ.ಶ್ರೀನಿವಾಸ ಮೂರ್ತಿ ಅವರುಗಳಲ್ಲದೇ, ಅವರ ತಂಡದ ಎಲ್ಲಾ 13 ಜನರೂ ಅತ್ಯಧಿತ ಮತಗಳನ್ನು ಗಳಿಸಿ, ಜಯ ಗಳಿಸಿದ್ದು, ಅವರ ಪ್ರತಿಸ್ಪರ್ಧಿಗಳಾಗಿದ್ದ ಐವರು ಪರಾಭವಗೊಂಡಿದ್ದಾರೆ.
ಬ್ಯಾಂಕಿನ ಆಡಳಿತ ಮಂಡಳಿಯ ಒಟ್ಟು 13 ಸ್ಥಾನ ಗಳಿಗೆ ಮುಂಬರುವ ಐದು ವರ್ಷಗಳ ಅವಧಿಗೆ ನಗರದ ಎಜಿಪಿ ಕಾಲೇಜಿನ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಚುನಾವಣೆಯಲ್ಲಿ ಪ್ರಭಾಕರ್ ಮತ್ತು ಆರ್.ಜಿ.ಎಸ್. ಅವರುಗಳೂ ಸೇರಿದಂತೆ, ಅವರ ಗುಂಪಿನ ಎಲ್ಲಾ 13 ಜನರೂ ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿದ್ದಾರೆ.
13 ಸ್ಥಾನಗಳ ಪೈಕಿ 11 ಸ್ಥಾನಗಳ ಸಾಮಾನ್ಯ ಕ್ಷೇತ್ರದಿಂದ ಜಯ ಗಳಿಸಿರುವ ಬ್ಯಾಂಕಿನ ಅತ್ಯಂತ ಹಿರಿಯ ನಿರ್ದೇಶಕ ಆರ್.ಎಲ್. ಪ್ರಭಾಕರ್ ಅವರು ಇತರರಿಗಿಂತ ಅತೀ ಹೆಚ್ಚು ಮತ ಗಳಿಕೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಆರ್.ಎಲ್. ಪ್ರಭಾಕರ್ (889), ಕೆ.ಎನ್. ಅನಂತರಾಮ ಶೆಟ್ಟಿ (878), ಬಿ.ಪಿ. ನಾಗಭೂಷಣ್ (856), ಕಾಸಲ್ ಎಸ್. ಸತೀಶ್ (831), ಜೆ. ರವೀಂದ್ರ ಗುಪ್ತ (826), ಕೆ.ವಿ. ಮಂಜುನಾಥ (817), ಆರ್.ಜಿ. ಶ್ರೀನಿವಾಸಮೂರ್ತಿ (815), ಬಿ.ಎಸ್. ಶಿವಾನಂದ (771), ಎ.ಎಸ್. ಸತ್ಯನಾರಾಯಣಸ್ವಾಮಿ (761), ಎನ್.ಕಾಶಿನಾಥ್ (758), ವೈ.ಬಿ. ಸತೀಶ್ (754) ಅವರುಗಳು ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಗಳಿಗೆ ಆರ್.ಎಲ್. ಪ್ರಭಾಕರ್ ಗುಂಪಿನಿಂದ ಸ್ಪರ್ಧೆ ಮಾಡಿದ್ದ ಶ್ರೀಮತಿ ಆರ್.ಬಿ. ಗೀತಾ (773) ಮತ್ತು ಶ್ರೀಮತಿ ಸುಧಾ ನಾಗರಾಜ್ (684) ಚುನಾಯಿತರಾಗಿದ್ದಾರೆ.
ವಕೀಲ ಎಸ್. ವೆಂಕಟೇಶ್ (457), ಆರ್.ವಿ. ಬಲರಾಮ ಶೆಟ್ಟಿ (298), ಸತೀಶ್ ಕುಮಾರ್ (268) ಸಾಮಾನ್ಯ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ. ಕೆ.ಎಂ. ಗೀತಾ ರಾಂ (451), ಬಿ.ಎಸ್. ಶ್ರುತಿ (210) ಮಹಿಳಾ ಮೀಸಲು ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.
ಸಹಕಾರ ಇಲಾಖೆಯ ಸತೀಶ್ ನಾಯ್ಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.