ಹೊನ್ನಾಳಿ, ಜ. 6- ಬಂಜೆತನವು ಶಾಪವಲ್ಲ ಎಂಬ ಆತ್ಮಧೈರ್ಯ ತುಂಬುವ ಹಾಗೂ ಶಿಬಿರದ ಸದುಪಯೋಗ ಪಡೆದುಕೊಂಡು ಮಾನಸಿಕ ಒತ್ತಡದಿಂದ ಹೊರಬರುವಂತೆ ಅರಿವು ಮೂಡಿಸುವುದೇ ಶಿಬಿರದ ಮುಖ್ಯ ಉದ್ದೇಶ ಎಂದು ದಾವಣಗೆರೆಯ ಜೆಜೆಎಂ ಮೆಡಿಕಲ್ ಐವಿಎಫ್ ತಜ್ಞ ಡಾ. ವರದಾ ಕಿರಣ್ ಹೇಳಿದರು.
ಹೊನ್ನಾಳಿ ಮತ್ತು ಮಲೇಬೆನ್ನೂರು ಲಯನ್ಸ್ ಕ್ಲಬ್, ದಾವಣಗೆರೆ ಕಡ್ಲಿ ಐವಿಎಫ್ ಸೆಂಟರ್, ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಆಶ್ರಯದಲ್ಲಿ ಗುರುವಾರ ನಡೆದ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಲ್ಲಿ ಗರ್ಭಕೋಶ ತೊಂದರೆ ಇದ್ದವರು ಮಾತ್ರ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಸೌಲಭ್ಯವಿದೆ ಎಂದರು.
ಮಲೇಬೆನ್ನೂರು ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ನಾಗರಾಜ್ ಬಿ. ಚಿಟ್ಟಕ್ಕಿ ಮಾತನಾಡಿ, ಬಂಜೆತನ ನಿವಾರಣ ಚಿಕಿತ್ಸೆಯು ಅವಶ್ಯಕವಾಗಿದ್ದು, ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರವು ನಮ್ಮ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಇಂದಿಗೆ 3 ನೇ ಸಮಾಲೋಚನಾ ಶಿಬಿರವಾಗಿದೆ.
ಹೊನ್ನಾಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ವೈದ್ಯರಾದ ಚಂದ್ರಪ್ಪ, ಹನುಮಂತಪ್ಪ ಹೊನ್ನಾಳಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಅಶೋಕ್ ಕುಮಾರ್, ಚಕ್ಕಡಿ ಶಿವಕುಮಾರ್, ಬಸವರಾಜ್, ಮಲ್ಲಿಕಾರ್ಜುನ್, ಮಲೆಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪಾರ್ವತಮ್ಮ ಸಿದ್ದೇಶ್, ಸದಸ್ಯರಾದ ರುದ್ರಗೌಡ, ಸಿರಿಗೆರೆ ಸಿದ್ದಪ್ಪ, ದಾವಣಗೆರೆ ಶಂಭು ಚಕ್ರಸಾಲಿ ಇನ್ನಿತರರಿದ್ದರು.