ದಾವಣಗೆರೆ ಜ. 6- ರಿಂಗ್ ರಸ್ತೆ ಬಳಿ ಇರುವ ಟರ್ಫ್ ಕ್ಲಬ್ ನಲ್ಲಿ ನಡೆದ ಅಂತರ ರಾಜ್ಯ ಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ಶಿವಮೊಗ್ಗದ ಜೈನ್ ತಂಡ ಎಸ್.ಕೆ.ಎಫ್.ಸಿ ತಂಡದ ವಿರುದ್ಧ 3-1ರಿಂದ ಜಯಗಳಿಸಿ ಪ್ರಥಮ ಸ್ಥಾನ ದೊಂದಿಗೆ ಪಾರಿತೋಷಕ ಹಾಗೂ ನಗದು ಬಹುಮಾನ ತನ್ನದಾಗಿಸಿಕೊಂಡಿತು.
ಸೆಮಿಫೈನಲ್‌ನಲ್ಲಿ ನಗರದ ಟಿಪ್ಪು ತಂಡದ ವಿರುದ್ಧ ರೋಚಕ ಆಟ ಪ್ರದರ್ಶಿಸಿದ ಜೈನ್ ತಂಡ ಫೈನಲ್ ತಲುಪುವಲ್ಲಿ ಯಶಸ್ವಿಯಾಯಿತು. ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಸೇರಿದಂತೆ, ಒಟ್ಟು 24 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ನಗರದ ಟಿಪ್ಪು ಫುಟ್ಬಾಲ್ ತಂಡವು ಪ್ರಪಥಮ ಬಾರಿಗೆ ಈ ಹೊನಲು ಬೆಳಕಿನ ಪಂದ್ಯಾವಳಿಯನ್ನು ಆಯೋಜಿಸಿತ್ತು. ವಿಜೇತ ತಂಡಗಳಿಗೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಲ್ಲಾವಲಿ ಮುಜಾಹೀದ್ ಖಾನ್ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಬಿ. ಸಿಕಂದರ್, ರಾಜ್ಯ ಫುಟ್ಬಾಲ್ ತಂಡದ ಸದಸ್ಯ ಮಹಮ್ಮದ್ ರಫೀಕ್, ಟಿಪ್ಪು ತಂಡದ ಅಧ್ಯಕ್ಷ ಬುತ್ತಿ ಗೌಸ್ ಪೀರ್, ಆಹಮದ್ ರಜಾ, ಇನಾಯತ್ (ಇಲ್ಲು), ಭಕ್ಷಿ ಸಾಬ್ ವೇದಿಕೆಯಲ್ಲಿ ಉಪಸ್ಥಿತರಿ ದ್ದರು. ಮಹಮ್ಮದ್ ಹುಸೇನ್, ಶಮ್ಸ್ ತಬ್ರೇಜ್ ತೀರ್ಪುಗಾರರಾಗಿದ್ದರು.