ಜೈನ್ ವಿದ್ಯಾಲಯದ 23ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಡಾ. ಮನೋಜ್‌ಕುಮಾರ್ ಪೂಜಾರ್
ದಾವಣಗೆರೆ, ಜ. 7- ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಮಕ್ಕಳ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ, ಇದು ಸೂಕ್ತವಲ್ಲ ಎಂದು ಡಾ. ಮನೋಜ್‌ಕುಮಾರ್ ಎಸ್. ಪೂಜಾರ್ ಅಭಿಪ್ರಾಯಪಟ್ಟರು.
ಅವರು ನಗರದ ಪಿ.ಜೆ. ಬಡಾವಣೆಯಲ್ಲಿರುವ ಜೈನ್ ವಿದ್ಯಾಲಯದ 23ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇಸ್ರೋದ ವಿಜ್ಞಾನಿ ಟಿ.ಎಸ್. ಗೋವಿಂದರಾಜು ಮಾತನಾಡಿ, ಇಸ್ರೋ ಕೈಗೊಂಡ ಸಾಧನೆಗಳ ಕಿರು ಪರಿಚಯ ಮಾಡಿದರು.
ಹೆಚ್. ರಮೇಶ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಮೇಶ್‌ಕುಮಾರ್ ಜೆ. ಶಾಲಾ ವಾರ್ಷಿಕ ವರದಿ ಓದಿದರು. ಸಯ್ಯೀದಾ ಖಾನಂ ಸ್ವಾಗತಿಸಿದರು. ಆಶಾ ನಿರೂಪಿಸಿದರು. ಅನಿತಾ ರಜಪೂತ್ ವಂದಿಸಿದರು.
ಇದೇ ಸಮಯದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಬೆಳ್ಳಿ ಮತ್ತು ಬಂಗಾರದ ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು.