ಕೊಕ್ಕನೂರು ಶಾಲೆಗೆ ಲೋಟ ಕೊಡುಗೆ

ಕೊಕ್ಕನೂರು ಶಾಲೆಗೆ ಲೋಟ ಕೊಡುಗೆ

ಮಲೇಬೆನ್ನೂರು, ಜ. 3 – ಕೊಕ್ಕನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ 240 ತಟ್ಟೆ ಹಾಗೂ ಲೋಟಗಳನ್ನು ಮತ್ತು  ಕೊಕ್ಕನೂರು ಹಾಲು ಉತ್ಪಾದಕರ ಸಂಘದವರು ತಟ್ಟೆಸ್ಟ್ಯಾಂಡನ್ನು ಶುಕ್ರವಾರ ಕೊಡುಗೆಯಾಗಿ ನೀಡಿದರು. 

ಈ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಎಸ್.ಡಿ.ಎಂ.ಸಿ. ಅಧ್ಯಕ್ಷ ಡಿ.ಎಲ್. ನಾಗರಾಜ್, ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ಹನುಮಂತರಾಯರು, ಎಕೆಸಿ ಶಾಲಾ ಮುಖ್ಯ ಶಿಕ್ಷಕ ಮರುಳಸಿದ್ದಪ್ಪ, ಕಮಲಾಕರ್, ಬೀರಲಿಂಗೇಶ್ವರ ಶಾಲೆಯ ಮುಖ್ಯ ಶಿಕ್ಷಕ ನಾಗೇಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!