ಶಿಕ್ಷಕ ಬಿ. ರೇವಣಸಿದ್ದಪ್ಪರಗೆ ಸೇವಾ ನಿವೃತ್ತಿ : ಬೀಳ್ಕೊಡುಗೆ

ಶಿಕ್ಷಕ ಬಿ. ರೇವಣಸಿದ್ದಪ್ಪರಗೆ ಸೇವಾ ನಿವೃತ್ತಿ : ಬೀಳ್ಕೊಡುಗೆ

ದಾವಣಗೆರೆ, ಜ.3- ತಾಲ್ಲೂಕಿನ ಕಡ್ಲೇಬಾಳು ಗ್ರಾಮದ ದೇವರಾಜ್ ಅರಸು ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಿ. ರೇವಣಸಿದ್ದಪ್ಪ ಅವರು ಸೇವಾ ನಿವೃತ್ತಿ ಹೊಂದಿದ್ದರ ಪ್ರಯುಕ್ತ ಅವರಿಗೆ ಸಡಗರ, ಸಂಭ್ರಮದಿಂದ ಬೀಳ್ಕೊಡುಗೆ ನೀಡಲಾಯಿತು.

ಈ ವೇಳೆ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ಈ ಶಾಲೆಯ ಮಣ್ಣಿನ ಋಣವನ್ನು ನನ್ನ ಕೊನೆಯ ಉಸಿರು ಇರುವವರೆಗೂ ಮರೆಯುವುದಿಲ್ಲ ಎಂದು ಭಾವುಕರಾದರು.

ಸಂಸ್ಥೆಯ ಸಿಬ್ಬಂದಿ ನನಗೆ ಉತ್ತಮ ಸಹಕಾರ ನೀಡಿದ್ದಾರೆ. ಇಲ್ಲಿ ಓದುವ ಮಕ್ಕಳು ತಮ್ಮ ತಂದೆ-ತಾಯಿಯರಿಗೆ ಒಳ್ಳೆಯ ಹೆಸರು ತರಬೇಕು ಮತ್ತು ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.  ವಿದ್ಯಾಸಂಸ್ಥೆಯಲ್ಲಿ 37ವರ್ಷ ಸೇವೆ ಸಲ್ಲಿಸಿ, ಶಾಲೆಯ ಸಾಧನೆಗೆ ಹೆಚ್ಚಿನ ಶ್ರಮ ಹಾಕುವ ನಿಟ್ಟಿನಲ್ಲಿ ತಮ್ಮ ಅಗಾಧ ಕೊಡುಗೆ ನೀಡಿದ್ದಾರೆ ಎಂದು ಸಂಸ್ಥೆಯ ಸಿಬ್ಬಂದಿ ಶ್ಲ್ಯಾಘಿಸಿದರು.

ಈ ವೇಳೆ ಹಿರಿಯ ನಿವೃತ್ತ ಶಿಕ್ಷಕರಾದ ಆಂಜನೇಯ ನಾಯ್ಕ, ಜಿ.ಎಸ್ ಪ್ರಭುಲಿಂಗಪ್ಪ, ಜಿ.ಸಿ ಬಸವರಾಜ್, ಶಿಕ್ಷಕರಾದ ಬಾವಿ ಕಟ್ಟೆ ಕೊಟ್ರಪ್ಪ, ಜಿ.ಹೆಚ್ ತಿಪ್ಪೇಸ್ವಾಮಿ, ಎನ್.ಕೆ ವಿಜಯ್ ಕುಮಾರ್, ಹನುಮಂತ ನಾಯ್ಕ, ಯು.ಎಸ್ ಬಸವರಾಜ್, ಗ್ರಾ.ಪಂ. ಹಾಲಿ ಸದಸ್ಯ ನಾಗರಾಜ್, ಮಣಿ, ಬಿ.ಆರ್ ಹನುಮಂತಪ್ಪ, ಎಸ್. ಬಸವರಾಜ್ ಇತರರು ಇದ್ದರು.

error: Content is protected !!