ದಾವಣಗೆರೆ, ಜ.3- ಕಳೆದ ಡಿಸೆಂಬರ್ 27, 28 ಮತ್ತು 29 ರಂದು ಅಸ್ಸಾಂನಲ್ಲಿ ನಡೆದ 6ನೇ ವಾರ್ಷಿಕ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಸ್ಪರ್ಧೆಗಳಲ್ಲಿ ನಗರದ ಈಗಲ್ ಫಿಟ್‍ನೆಸ್‍ನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 15 ಬಂಗಾರ, 4 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಮೋಯ್ ಥೈ ಕಿಕ್ ಬಾಕ್ಸಿಂಗ್ ಮತ್ತು ಕಿಯೋ ಕುಷಿನ್‍ನಲ್ಲಿ ವಿವಿಧ ಕೆಜಿ ವಿಭಾಗಗಳಲ್ಲಿ ಭಾಗವಹಿಸಿದ್ದ ಹರ್ಷಿತ್, ಸಮರ್ಥ ಎಸ್.ಹೆಚ್, ಸುಶೀಲ್ ರೆಡ್ಡಿ, ಪ್ರತೀಕ್ ಎಸ್.ವಿ, ಪ್ರಜ್ವಲ್ ಕೆ.ವಿ, ಶಿವಂ, ದೀಕ್ಷಿತ್, ಜಗದೀಶ್ ಮತ್ತು ಅರ್ಪಿತಾ ಹೆಚ್ ಅವರುಗಳು ಬಂಗಾರದ ಪದಕಗಳನ್ನು ಗಳಿಸಿದರೆ, ಅಕ್ಷಯ್ ಎಸ್.ಕೆ, ಚೇತನ್ ಎಸ್.ಪಿ, ದರ್ಶನ್ ಕೆ.ಎನ್ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
ಕುಮಿಟೆಯಲ್ಲಿ ಪವನಿಕಾ, ಸಮರ್ಥ ಕುಮಾರ್ ಎಸ್, ಆರ್ಯನ್ ಎ, ವಿನಾಯಕ ಕೆ.ವಿ, ಪ್ರಣೀತ್ ಪಿ. ಪೂಜಾರ್ ಮತ್ತು ನಿಧಿ ಕೆ.ವಿ. ಬಂಗಾರದ ಪದಕಗಳನ್ನು ಹಾಗು ಪ್ರಣವ್ ಪಿ. ಪೂಜಾರ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಕಟಾನಲ್ಲಿ ಪ್ರಣವ್ ಪಿ. ಪೂಜಾರ್ ಬೆಳ್ಳಿ ಪದಕ ಪಡೆದಿದ್ದಾರೆ. ಪವನಿಕಾ, ಹರ್ಷಿತ್, ಸಮರ್ಥ ಕುಮಾರ್ ಎಸ್, ಆರ್ಯನ್ ಎ, ಯೋಗೇಶ್, ವಿನಾಯಕ ಕೆ.ವಿ, ಪ್ರಣೀತ್ ಪಿ. ಪೂಜಾರ್, ನಿಧಿ ಕೆ.ವಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಪದಕ ಸ್ವೀಕಾರ ಸಮಾರಂಭದಲ್ಲಿ ಈಗಲ್ ಫಿಟ್ನೆಸ್‍ನ ತರಬೇತುದಾರ ವೆಂಕ್ಸಿ ಸೆನ್ಸೈ ಸಹ ಉಪಸ್ಥಿತರಿದ್ದರು.