ಮಲೇಬೆನ್ನೂರು, ಜ. 3 – ಹೊಳೆಸಿರಿಗೆರೆ ಗ್ರಾಮದ ಭದ್ರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ದೇವೇಂದ್ರಪ್ಪ ಮತ್ತು ಉಪಾಧ್ಯಕ್ಷರಾಗಿ ಮಾಗೋಡ ಚಂದ್ರಪ್ಪ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಾಗಿ ಎ. ಕೊಟ್ರಪ್ಪ, ಬ್ಯಾಲದಹಳ್ಳಿ ಮಂಜಪ್ಪ, ಎನ್. ತಿಪ್ಪೇಸ್ವಾಮಿ, ಟಿ. ಆಂಜನೇಯ, ಕೆ. ವೃಷಭೇಂದ್ರಪ್ಪ, ಕೆ. ಸುನಂದಮ್ಮ, ಮಂಜಮ್ಮ ಶಿಡೆನೂರು, ಕುರುಬರ ಶಿವಪ್ಪ, ಪರಶುರಾಮಪ್ಪ, ಮೈಗೊಳ ಹನುಮಂತಪ್ಪ ಇವರುಗಳೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿರ್ಬಂಧಕರ ಕಛೇರಿಯ ಸಿಜಿ ಜಗದೀಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ. ಹಾಲೇಶಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಲಿಂಗನಗೌಡ ಮತ್ತಿತರರು ಈ ವೇಳೆ ಹಾಜರಿದ್ದು, ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.