ದಾವಣಗೆರೆ, ಜ. 2 – ಕರ್ನಾಟಕ ಸಂಸ್ಕೃತ ವಿಶ್ವವಿ ದ್ಯಾಲಯ ಆಯೋಜಿಸಿದ್ದ ಡಿಪ್ಲೋಮಾ ಇನ್ ಜೋತಿಷ್ಯದಲ್ಲಿ ದಾವಣಗೆರೆ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ವಿದ್ಯಾರ್ಥಿ ಶಾರದಾ ಡಿ.ಆರ್. 448 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ಎ.ಎಂ. ಸುನಂದಾ 429, ಆನಂದಯ್ಯ ಟಿ.ಎಂ. 428 ಅಂಕ ಗಳಿಸಿ ರಾಜ್ಯಕ್ಕೆ ಕ್ರಮವಾಗಿ 4 ಮತ್ತು 5 ನೇಯ ಸ್ಥಾನ ಗಳಿಸಿದ್ದಾರೆ.
ಕರಿಸಿದ್ದೇಶ್ವರ ಬಿ.ಸಿ. 420 ಹಾಗೂ ಶಾಂತಲಾ ಬಿ.ಸಿ. 415 ಅಂಕ ಗಳಿಸಿ, ಜಿಲ್ಲೆಗೆ 4 ಮತ್ತು 5 ನೇಯ ಸ್ಥಾನದಲ್ಲಿದ್ದಾರೆ.
ಕೇಂದ್ರಕ್ಕೆ ಶೇ. 100 ರಷ್ಟು ಫಲಿತಾಂಶ ಬಂದಿದೆ. 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16 ಮಂದಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶಕ್ಕೆ ಕರ್ನಾಟಕ ರಾಜ್ಯ ಜೋತಿಷ್ಯರು ಹಾಗೂ ಜೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಜೇಂದ್ರ, ಹರ್ಷ ವ್ಯಕ್ತಪಡಿಸಿದ್ದು, ವೈದ್ಯಕೀಯ ಜೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಮೂಲಕ ಜೋತಿಷ್ಯವೂ ಒಂದು ವಿಜ್ಞಾನ ಎಂಬುದನ್ನು ಸಾಬೀತುಪಡಿಸಬೇಕು. ಹೆಚ್ಚಿನ ಸಂಖ್ಯೆ ಯಲ್ಲಿ ಈ ವಿದ್ಯೆಯನ್ನು ಕಲಿಯಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಗದಿಗೆಪ್ಪಯ್ಯ, ಕಾರ್ಯ ದರ್ಶಿ ಸಿ.ಕೆ. ಆನಂದತೀರ್ಥಾಚಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮುಂದಿನ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಮೊ. 9964062223 ಸಂಪರ್ಕಿಸಬಹುದೆಂದು ಪ್ರಾಂಶುಪಾಲ ಪ್ರವೀಣ್‌ಕುಮಾರ್ ಆರ್. ಬಿ. ತಿಳಿಸಿದ್ದಾರೆ.