ಇಂದು `ಶಿಕ್ಷಣ ಅದಾಲತ್-ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ’ ಅಭಿಯಾನ ಮುಂದುವರಿಕೆ

ಇಂದು `ಶಿಕ್ಷಣ ಅದಾಲತ್-ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ’ ಅಭಿಯಾನ ಮುಂದುವರಿಕೆ

ಸ್ವಾಭಿಮಾನಿ ಬಳಗದ ಶಿಕ್ಷಣ ಅದಾಲತ್ – ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಇಂದು ನ್ಯಾಮತಿ-ಹೊನ್ನಾಳಿ ತಾಲ್ಲೂಕುಗಳ ಹತ್ತು ಸರ್ಕಾರಿ ಶಾಲೆಗಳಲ್ಲಿ ಮುಂದುವರಿಯಲಿದೆ.

ಇಂದು  ಬೆಳಿಗ್ಗೆ 9.30 ರಿಂದ ಸವಳಂಗದಿಂದ ಆರಂಭವಾಗಲಿದೆ. ಬಳಿಕ ಸೋಗಿಲು, ಫಲವನಹಳ್ಳಿ, ಕಂಚುಗಾರನಹಳ್ಳಿ, ಗಂಜೇನಹಳ್ಳಿ, ಚಟ್ನಹಳ್ಳಿ-2, ನ್ಯಾಮತಿ, ದೊಡ್ಡೆ ತ್ತಿನಹಳ್ಳಿ, ಕಂಕನಹಳ್ಳಿ ಹಾಗೂ ಕೊಡಚಗೊಂಡ ನಹಳ್ಳಿ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲೂ ಅಭಿಯಾನ ನಡೆಯಲಿದೆ ಎಂದು ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ., ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕಲಿಕಾ ಕಾರ್ಯಾಗಾರ ಗಳನ್ನು ಇನ್‌ಸೈಟ್ಸ್ ಐ.ಎ.ಎಸ್. ಅಕಾಡೆಮಿ  ಸಹಯೋಗದೊಂದಿಗೆ  ಸ್ವಾಭಿಮಾನಿ ಬಳಗವು ಆಯೋಜಿಸಲಿದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. 

error: Content is protected !!