ದಾವಣಗೆರೆ, ಜ. 2- ಕುರುಬ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ 537ನೇ ಶ್ರೀ ಕನಕದಾಸರ ಜಯಂತ್ಯೋತ್ಸವ ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ದಿನಾಂಕ 5 ರಂದು ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಹಂದರಗಂಬ ಪೂಜೆ ಹಾಗೂ ಸ್ಥಳ ಪರೀಶಿಲನೆಯನ್ನು ಗುರುವಾರ ಕುರುಬ ಸಮಾಜದ ಮುಖಂಡರು ಮಾಡಿದರು.
ಕನಕ ಜಯಂತ್ಯೋ ತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿ ದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯಾದ ತೊಂದರೆ ಯಾಗದಂತೆ ಸುಗಮವಾಗಿ ಕಾರ್ಯಕ್ರಮ ನಡೆಸಲು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಗೋಣೆಪ್ಪ. ಹಾಲೇಕಲ್ಲು ಎಸ್ ಟಿ. ಅರವಿಂದ್, ಇಟ್ಟಿಗುಡಿ ಮಂಜುನಾಥ್, ಬಿ. ಲಿಂಗರಾಜ್, ಕೆ. ರೇವಣ್ಣ, .ಪ್ರಕಾಶ್. ಎಸ್.ಎಸ್. ಗೀರೀಶ್, ಚನ್ನಗಿರಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಡಿ. ಶಿವಣ್ಣ, ಕುರುಬರಕೇರಿ ಜಯಣ್ಣ. ಡಿ.ಜಿ.ಪ್ರಕಾಶ್, ಮಂಜುನಾಥ್ ಇಟ್ಟಿಗುಡಿ, ಶಿವಣ್ಣ ಮಾಸ್ಟರ್. ಆನಂದ್ ಇಟ್ಟಿಗುಡಿ, ವಿನಯ್ ಜೋಗಪ್ಪನವರ, ನವೀನ್ ಕುಮಾರ್ ಬಿ.ಎಚ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.