ದಾವಣಗೆರೆ, ಜ.1 – ಪುಟ್ಟಣ್ಣ ಕಣಗಾಲ್ ಅವರು ನಾಗರ ಹಾವು ಚಿತ್ರದ ಮೂಲಕ ಡಾ. ವಿಷ್ಣುವರ್ಧನ್ ಅವರನ್ನು ಅಂದು ಕನ್ನಡ ಜನತೆಗೆ ಪರಿಚಯಿಸಿದರು. ತನ್ಮೂಲಕ ಒಬ್ಬ ಪ್ರಬುದ್ಧ ಕಲಾವಿದನನ್ನು ಸೃಷ್ಟಿಸಿದ ಕೀರ್ತಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲತಕ್ಕದ್ದು ಎಂದು ಕರ್ನಾಟಕ ಜನಮನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ತಿಳಿಸಿದರು.
ಡಾ. ವಿಷ್ಣುವರ್ಧನ್ ಅವರು ನಿಧನರಾಗಿ ನಿನ್ನೆಗೆ 14 ವರ್ಷಗಳು ತುಂಬಿ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ನಮ್ಮ ಜೈ ಕರುನಾಡ ವೇದಿಕೆ ವತಿಯಿಂದ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯನ್ನು ಪುಟ್ಟರಾಜ ಗವಾಯಿಗಳವರ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಷ್ಣುವರ್ಧನ್ ಅವರು ಅತ್ಯಂತ ಜನಪ್ರಿಯ ಕಾದಂಬರಿಗಳ ಚಿತ್ರಗಳನ್ನು ಮಾಡುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿರುವುದು ಮಾತ್ರವಲ್ಲದೇ ಅನೇಕ ಕೌಟುಂಬಿಕ ಚಿತ್ರಗಳನ್ನು ನೀಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಮಹಾನ್ ನಟರೆನಿಸಿದ್ದಾರೆ ಎಂದು ಬಂಡೀಕರ್ ತಿಳಿಸಿದರು.
ಅನೇಕ ಕನ್ನಡಪರ ಸಂಘಟನೆಗಳು ನಾಡು, ನುಡಿಗಾಗಿ ಇಂದಿಗೂ ಶ್ರಮಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಸೋಗಿ ಶಾಂತಕುಮಾರ್ ಅವರು ತಿಳಿಸುತ್ತಾ, ಅತ್ಯಂತ ಸರಳ ರೀತಿಯಲ್ಲಿ ಕಾರ್ಯಕ್ರಮ ಸಂಯೋಜನೆ ಮಾಡುವುದರ ಮೂಲಕ ಸಾಧಕರನ್ನೂ ಸನ್ಮಾನಿಸಿ, ಸಮುದಾಯಕ್ಕೆ ಉತ್ತಮ ಸಂದೇಶ ನೀಡಿದ ನಮ್ಮ ಜೈ ಕರುನಾಡ ವೇದಿಕೆಯ ಪ್ರಯತ್ನ ಆದರ್ಶಪ್ರಾಯವಾಗಿದೆ ಎಂದು ಶ್ಲ್ಯಾಘಿಸಿದರು
ಸಮಾರಂಭದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ಸಿಮ್ರಾನ್, ನಯನ (ಪಿಯುಸಿ), ಪತ್ರಕರ್ತ ಜಿ.ಎಸ್. ವಸಂತ ಕುಮಾರ್, ಕ್ರೈಮ್ ಪೊಲೀಸ್ ಶಂಕರ್ ಆರ್. ಜಾಧವ್ ಮತ್ತು ಛಾಯಾಗ್ರಹಣ ಹಾಗೂ ವಿಡಿಯೋ ಸಂಕಲನಕಾರ ಎಸ್. ರಂಗಸ್ವಾಮಿ ಅವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಟಿ. ಮಂಜು ನಾಥಗೌಡ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರ ಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜು ನಾಥ ಮಾತನಾಡಿ, ಇಂತಹ ಸ್ಮರಣೋತ್ಸವದ ಸಮಾರಂಭದಲ್ಲಿ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರವನ್ನು ಏರ್ಪಡಿಸಿರು ವುದು ಸ್ತುತ್ಯಾರ್ಹ ಸಂಗತಿ ಎಂದರು. ಎಲ್ಲಾ ಕನ್ನಡಪರ ಸಂಘಟನೆಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ಮೂಲಕ ಸಮಾಜಮು ಖಿಯ ಸರಳತೆಯನ್ನು ರೂಢಿಸಿಕೊಳ್ಳಬೇಕೆಂದರು.
ಮುಖ್ಯಅತಿಥಿಗಳಾಗಿ ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಜಿ. ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮೈಸೂರಿನ ಜಿಲ್ಲಾ ಉಪಾಧ್ಯಕ್ಷ ಶರೀಫ್ ಸಾಬ್, ಮೈಸೂರಿನ ಜಿಲ್ಲಾ ಸಂಚಾಲಕ ಬಸವರಾಜ್, ಬಳ್ಳಾರಿ ಅಧ್ಯಕ್ಷ ಚಂದ್ರಪ್ಪ, ದಾವಣಗೆರೆ ಜಿಲ್ಲಾಧ್ಯಕ್ಷ ಲಿಂಗಪ್ಪ, ಯುವಘಟಕದ ಅಧ್ಯಕ್ಷ ಸಾಯಿ, ರಾಜ್ಯ ಯುವಘಟಕದ ಅಧ್ಯಕ್ಷ ಸಾಗರ್ ಸೇರಿದಂತೆ ಜಯಂತ್, ಅರುಣ್‍ಕು ಮಾರ್, ಲೋಕೇಶ್, ವಿದ್ಯಾರ್ಥಿ ಘಟಕದ ಮಹಿಳಾ ಅಧ್ಯಕ್ಷರಾದ ಮಮತಾ, ನೇಹ, ಛಾಯಾಗ್ರಾಹಕ ವಿಜಯ್ ಕುಮಾರ್ ಜೈನ್, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಕೌಶಿಕ್‍ಗೌಡ, ತಿಪ್ಪೇಶ್, ಜಾಕೀರ್‍ಸಾಬ್, ಸೂರಿ ಸೇರಿದಂತೆ ಇನ್ನು ಮುಂತಾದವರು ಪಾಲ್ಗೊಂಡಿದ್ದರು.