ದಾವಣಗೆರೆ, ಜ. 1- ಮಹಾನಗರ ಪಾಲಿಕೆ ನೌಕರ ಮಲ್ಲೇಶ್ ವೈ. ಅವರು ನಿನ್ನೆ ವಯೋ ನಿವೃತ್ತಿ ಹೊಂದಿದ್ದು, ಅವರನ್ನು ಮಹಾನಗರ ಪಾಲಿಕೆ ನೌಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನೌಕರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜು, ಟಿ.ಸಿ. ಬಸವರಾಜಯ್ಯ, ಸುರೇಶ್ ಪಾಟೀಲ್, ಅಸ್ಲಾಂ, ಸಿ. ಕೃಷ್ಣಪ್ಪ ಸೇರಿದಂತೆ ಅಧಿಕಾರಿ, ನೌಕರರು ಉಪಸ್ಥಿತರಿದ್ದರು.
January 5, 2025