ದಾವಣಗೆರೆ, ಜ. 1- ಸಮಾಜ ಸೇವಕ, ರಾಜಕಾರಣಿ, ಯುವ ನೇತಾರ, ಉದ್ಯಮಿ ಪ್ರವೀಣ್ ಹುಲ್ಲುಮನೆ ಅವರ ಹುಟ್ಟುಹಬ್ಬದ ಪ್ರಯುಕ್ತ ಸೇಂಟ್ ಜಾನ್ಸ್ ಶಾಲೆಯಲ್ಲಿ ದಾವಣಗೆರೆ ನೇತ್ರಾಲಯದ ಯುನಿಟ್ ಡಾ. ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ, ಬೋಧಕ, ಬೋಧಕೇತರ ವೃಂದದವರಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್‌ಕುಮಾರ್, ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ, ಖಜಾಂಚಿ ಪ್ರವೀಣ್ ಹುಲ್ಲುಮನೆ, ಶಾಲೆಯ ಪ್ರಾಂಶುಪಾಲರಾದ ಸೈಯದ್ ಆರೀಫ್ ಆರ್., ಶ್ರೀಮತಿ ಪ್ರೀತಾ ಟಿ. ರೈ, ಉಪ ಪ್ರಾಂಶುಪಾಲರಾದ ಎಸ್.ಎಂ. ನೇತ್ರಾವತಿ, ಹೊನ್ನೂರು ಗೊಲ್ಲರಹಟ್ಟಿ ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ರಶ್ಮಿ, ಸಂಯೋಜಕರಾದ ಶ್ರೀಮತಿ ಎಸ್.ಎಂ. ರೂಪಾ ಉಪಸ್ಥಿತರಿದ್ದರು.