ದಾವಣಗೆರೆ, ಜ. 1 – ನಗರದಲ್ಲಿ ನಡೆದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ (14 ವರ್ಷದೊಳಗಿನ ಬಾಲಕರ ವಿಭಾಗ) ಬೆಂಗಳೂರು ವಿಭಾಗದ ಹಿರಿಯೂರು ತಾಲ್ಲೂಕು ಧರ್ಮಪುರದ ಸ್ವಾಭಿಮಾನ ವಸತಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದ ಆಟಗಾರರಿಗೆ ಹಾಗೂ ತರಬೇತುದಾರ ಮುರುಳಿಧರ್ ಅವರನ್ನು ದಾವಣಗೆರೆ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ಹಿರಿಯ ಕ್ರೀಡಾಪಟು ಟಿ. ಕುಮಾರ ಸ್ವಾಮಿ ಅಭಿನಂದಿಸಿದ್ದಾರೆ.
January 5, 2025