ತೇಜಸ್ವಿನಿ ಕುರ್ಕಿ ಅವರಿಗೆ ಚಿನ್ನದ ಪದಕ

ತೇಜಸ್ವಿನಿ ಕುರ್ಕಿ ಅವರಿಗೆ ಚಿನ್ನದ ಪದಕ

ದಾವಣಗೆರೆ, ಜ. 1 – ನಗರದ ಸೇಂಟ್ ಜಾನ್ಸ್  ಶಾಲೆಯ ವಿದ್ಯಾರ್ಥಿನಿ ಕೆ. ಎಸ್. ತೇಜಸ್ವಿನಿ ಕುರ್ಕಿ ಅವರು 2023 – 24 ನೇ ಶೈಕ್ಷಣಿಕ ಸಾಲಿನ  ಎಸ್.ಎಸ್.ಎಲ್ ಸಿ, ಪರೀಕ್ಷೆಯಲ್ಲಿ ರಾಷ್ಟ್ರ ಭಾಷೆ ಹಿಂದಿಯಲ್ಲಿ 100ಕ್ಕೆ 100 ಮತ್ತು ಮಾತೃ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳ ಮೂಲಕ 625 ಕ್ಕೆ 608 (ಶೇ.97.28 ) ಅಂಕಗಳನ್ನು  ಪಡೆದು ವಿಶಿಷ್ಠ ದರ್ಜೆಯಲ್ಲಿ ಸಾಧನೆಗೈದು, ಹುಲ್ಲುಮನೆ ರಾಮಪ್ಪ ಭೀಮಪ್ಪ ಚಿನ್ನದ ಪದಕ ಪಡೆದು ಪ್ರತಿಭಾನ್ವಿತ ವಿದ್ಯಾರ್ಥಿನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ತೇಜಸ್ವಿನಿ, ಕುರ್ಕಿ ಗ್ರಾಮದ ಕೆ.ಜಿ. ಶಿವಶಂಕರಪ್ಪ ಲಲಿತಮ್ಮನವರ ಮೊಮ್ಮಗಳು,  ಸಾಹಿತಿ ಎಸ್. ಸಿದ್ದೇಶ್ ಕುರ್ಕಿ ಮತ್ತು ಶ್ರೀಮತಿ ಶೀಲಾ ದಂಪತಿ ಪುತ್ರಿ. ತೇಜಸ್ವಿನಿ, ಅವರನ್ನು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲೆಯ  ಆಡಳಿತ ಮಂಡಳಿಯವರು ಅಭಿನಂದಿಸಿದ್ದು, ಸಮಾರಂಭದಲ್ಲಿ ಚಿತ್ರದುರ್ಗದ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರಾದ ಬಿ. ಆನಂದ, ಶಾಲೆಯ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ, ಖಜಾಂಚಿ ಹುಲ್ಲುಮನೆ ಪ್ರವೀಣ್‌ ಉಪಸ್ಥಿತರಿದ್ದರು.

error: Content is protected !!