ಶಿವ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ.ಬಿ. ಸಂಗಮೇಶ್ವರಗೌಡರು

ಶಿವ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ.ಬಿ. ಸಂಗಮೇಶ್ವರಗೌಡರು

ಉಪಾಧ್ಯಕ್ಷರಾಗಿ ಐಗೂರು ಸಿ. ಚಂದ್ರಶೇಖರ್ 

ದಾವಣಗೆರೆ, ಜ. 2 – ಸ್ಥಳೀಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶಿವ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ಮಾಗನೂರು ಸಂಗಮೇಶ್ವರ ಗೌಡ್ರು ಅಧ್ಯಕ್ಷರಾಗಿ ಮತ್ತು ಹಾಲಿ ಉಪಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂ.ಬಿ. ಸಂಗಮೇಶ್ವರಗೌಡರ ಹೆಸರನ್ನು ನಿರ್ದೇಶಕ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಸೂಚಿಸಿದಾಗ, ನಿರ್ದೇಶಕ ದೊಗ್ಗಳ್ಳಿ ಬಸವರಾಜ್ ಅನುಮೋದಿಸಿದರು. ಐಗೂರು ಸಿ. ಚಂದ್ರಶೇಖರ್‌ ಅವರ ಹೆಸರನ್ನು ನಿರ್ದೇಶಕ  ಜೆ.ಎಸ್. ಸಿದ್ದಪ್ಪ ಸೂಚಿಸಿದಾಗ ಡಿ.ಎಂ. ಶಿವಕುಮಾರ್ ಅನುಮೋದಿಸಿದರು.

 ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಸಿ. ದೊಡ್ಡಬಸಪ್ಪ, ಜಯಣ್ಣ ಹೆಚ್. ರಾಮಗೊಂಡನಹಳ್ಳಿ, ವಾಗೀಶ್ ಬಾಬು ಜಿ.ಪಿ. ಶ್ರೀಮತಿ ಉಮಾ ಡಿ.ಹೆಚ್., ಶ್ರೀಮತಿ ಕೆ.ಜಿ. ಶಂಕ್ರಮ್ಮ, ಮತ್ತು ಶ್ರೀಮತಿ ಅನಿತ ಡಿ.ಎಲ್. ಇವರು ಉಪಸ್ಥಿತರಿದ್ದರು.

ದಾವಣಗೆರೆ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಎಸ್. ಮಂಜುಳ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

error: Content is protected !!