ದಾವಣಗೆರೆ, ಜ. 1- ನಗರದ ಎಸ್. ಎ. ಎಸ್. ಎಸ್. ಯೋಗ ಕೇಂದ್ರದ ಶ್ರೀಮತಿ ಎಸ್.ಪಿ. ಲಾವಣ್ಯ ಶ್ರೀಧರ್ ಅವರು ಪತಂಜಲಿ ಕಾಲೇಜ್ ಆಫ್ ರಿಸರ್ಚ್ ಸೆಂಟರ್ ನ್ಯಾಷನಲ್ ಯೋಗ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಸಹಯೋಗದೊಂದಿಗೆ ಗೋವಾದಲ್ಲಿ ಕಳೆದ ವಾರ ನಡೆದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆಯುವುದರ ಮೂಲಕ `ಚಾಂಪಿಯನ್ ಆಫ್ ಚಾಂಪಿಯನ್‌ಶಿಪ್’ ವಿಜೇತರಾಗಿದ್ದಾರೆ.
ಲಾವಣ್ಯ ಶ್ರೀಧರ್ ಅವರಿಗೆ ಎಸ್.ಎ.ಎಸ್.ಎಸ್. ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎನ್. ಪರಶುರಾಮ್ ಅಭಿನಂದಿಸಿದ್ದಾರೆ.