ಮಲೇಬೆನ್ನೂರು : ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಮಲೇಬೆನ್ನೂರು : ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಮಲೇಬೆನ್ನೂರು,  ಜ. 1- ಶ್ರೀ ಮಾರುತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನವದೆಹಲಿಯ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಸಂಸ್ಥೆ ಉಚಿತವಾಗಿ ನೀಡಿದ ಸ್ಕೂಲ್ ಬ್ಯಾಗ್‌ಗಳನ್ನು ವಿತರಣೆ ಮಾಡಲಾಯಿತು.

ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ, ಮಲೇಬೆನ್ನೂರು ಕೇಂದ್ರದ ಸಂಪನ್ಮೂಲ ವ್ಯಕ್ತಿ ಕರಿಬಸಪ್ಪ ಬಸಲಿ, ತಾ. ಅನುದಾನಿತ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಕೆ. ಭೀಮಪ್ಪ ಇವರುಗಳ ಸಹಕಾರದಿಂದ ನಮ್ಮ ಶಾಲೆಗೆ ವಿವಿಧ ಸೌಲಭ್ಯಗಳು ಸಿಗುತ್ತಿವೆ ಎಂದು ಮಾರುತಿ ವಿದ್ಯಾ ಸಂಸ್ಥೆಯ ನಿರ್ದೇಶಕ ವಾಸವಿ ರಮೇಶ್ ಹೇಳಿದರು. 

ಶಿಕ್ಷಕರ ಸೇವಾ ವೇದಿಕೆಯ ಶಿಕ್ಷಕರಾದ ಹೊಸಪಾಳ್ಯ ಪರಶುರಾಮ್, ಯಲವಟ್ಟಿ ರಾಘವೇಂದ್ರ, ಮೂಗಿನ ಗೊಂದಿ  ಪ್ರವೀಣ, ಹಾಲಿವಾಣ ಮಲ್ಲಿಕಾರ್ಜುನ್,  ವಿದ್ಯಾ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ್ ಜೋಯಿಸ್, ಕಾರ್ಯದರ್ಶಿ ಎಂ.ಡಿ. ಮುರುಳೀಧರ್ ರಾವ್, ಶಾಲಾ ಮುಖ್ಯ ಶಿಕ್ಷಕ ಸಿ. ಪರಮೇಶ್ವರಪ್ಪ ಹಾಗೂ ಸಹ ಶಿಕ್ಷಕರು ಈ ವೇಳೆ ಹಾಜರಿದ್ದರು.

error: Content is protected !!