ಜಿಲ್ಲೆಯ ಇಬ್ಬರು ಪೊಲೀಸರು ನಿವೃತ್ತಿ ; ಬೀಳ್ಕೊಡುಗೆ

ಜಿಲ್ಲೆಯ ಇಬ್ಬರು ಪೊಲೀಸರು ನಿವೃತ್ತಿ ; ಬೀಳ್ಕೊಡುಗೆ

ದಾವಣಗೆರೆ, ಜ. 1- ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ 2024, ಡಿಸೆಂಬರ್ 31ರಂದು ವಯೋ ನಿವೃತ್ತಿ ಹೊಂದಿದ ಹರಿಹರ ನಗರ ಪೊಲೀಸ್ ಠಾಣೆಯ ಎಎಸ್ಐ ಮಹಮ್ಮದ್ ರಸೂಲ್ ಹಾಗೂ ಜಗಳೂರು ಪೊಲೀಸ್ ಠಾಣೆಯ ಸಿಹೆಚ್‌ಸಿ ಆರ್.ಟಿ. ಗುರುಮೂರ್ತಿ ಅವರುಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಿನ್ನೆ ನಡೆದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.  ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ  ವಿಜಯಕುಮಾರ ಎಂ. ಸಂತೋಷ ಮತ್ತು ಜಿ. ಮಂಜುನಾಥ್ ಅವರುಗಳು ನಿವೃತ್ತರನ್ನು  ಸನ್ಮಾನಿಸಿ, ಅಭಿನಂದಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು.

ಜಿಲ್ಲೆಯ ಇಬ್ಬರು ಪೊಲೀಸರು ನಿವೃತ್ತಿ ; ಬೀಳ್ಕೊಡುಗೆ - Janathavani

error: Content is protected !!