ಇಂದು ವಿಶ್ವೇಶತೀರ್ಥ ಶ್ರೀಪಾದಂಗಳವರ 5ನೇ ಆರಾಧನೆ

ಇಂದು ವಿಶ್ವೇಶತೀರ್ಥ ಶ್ರೀಪಾದಂಗಳವರ 5ನೇ ಆರಾಧನೆ

ಅಖಿಲ ಭಾರತ ಮಾಧ್ವ ಮಹಾಮಂಡಲ ಹರಿಹರ ಶಾಖೆ ವತಿಯಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾಂದಂಗಳವರ 5 ನೇ ಆರಾಧನಾ ಮಹೋತ್ಸವವವು  ಇಂದು ಬಿರ್ಲಾ ಕಲ್ಯಾಣ ಮಂಟಪ ದಲ್ಲಿ ನಡೆಯಲಿದೆ ಎಂದು ವಿ. ವೆಂಕಟೇಶಾಚಾರ್ ತಿಳಿಸಿದರು.    ಶ್ರೀ ವಿಶ್ವ ಮಾಧ್ವ ಮಹಾ ಪರಿಷತ್ತು ಉತ್ತಾರದಿಮಠ ಇವರಿಂದ ಇಂದು ಬೆಳಿಗ್ಗೆ 8 ಗಂಟೆಗೆ ವಾಯುಸ್ಥುತಿ ಪುನಶ್ಚೆರಣೆ ಕಾರ್ಯಕ್ರಮ. ಬೆಳಗ್ಗೆ 10 ಕ್ಕೆ ಭಾರತಿ ಭಜನಾ ಮಂಡಳಿಯ ವತಿಯಿಂದ ಭಜನೆ, 11 ಕ್ಕೆ ಪಂ, ವಿ, ಶ್ರೀ ಸುರೇಶಾಚಾರ್ಯ ರವರಿಂದ ಪ್ರವಚನ, 12 ಕ್ಕೆ ಪಂ.ವಿ. ಗುರುರಾಜಾಚಾರ್ಯ ಗುಡಿ ಅಥಣಿ ಪೂರ್ಣಪ್ರಜ್ಞಾ ಪೀಠದ ವಿದ್ವಾಂಸರಿಂದ ಉಪನ್ಯಾಸ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.

error: Content is protected !!