ಕೊಕ್ಕನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಹನುಮಗೌಡ

ಕೊಕ್ಕನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಹನುಮಗೌಡ

ಮಲೇಬೆನ್ನೂರು, ಡಿ. 31 – ಕೊಕ್ಕನೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹನುಮಗೌಡ ಕಡೂರು ಮತ್ತು ಉಪಾಧ್ಯಕ್ಷರಾಗಿ ಎಂ. ಷಣ್ಮುಖ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ನೂತನ ನಿರ್ದೇಶಕರಾಗಿ ಶ್ರೀಮತಿ ನಿರ್ಮಲ, ಕೆ.ಪಿ. ನಿರಂಜನ್, ಕೆ.ಹೆಚ್. ಚಂದ್ರಶೇಖರ್, ಡಿ.ಕೆ. ಲೋಕಪ್ಪ, ಶ್ರೀಮತಿ ಶಂಕ್ರಮ್ಮ, ಎ.ಕೆ. ಅಂಜಿನಪ್ಪ, ಡಿ. ಮಾರುತಿ, ರೂಪಮ್ಮ, ಹುಗ್ಗಿ ಬಸಪ್ಪ, ಪಿ.ಎಲ್. ಅಂಜಿನಪ್ಪ, ಇವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತ ಪ್ರಕಟಿಸಿದ್ದಾರೆ. 

ಗ್ರಾಮದ ಮುಖಂಡರಾದ ಎಂ. ನಿಂಗನಗೌಡ, ದಾಸರ ಸೋಮಶೇಖರಪ್ಪ, ಹೆಚ್.ಹೆಚ್. ನಾಗರಾಜ್, ಡಿ.ಎಲ್. ನಾಗರಾಜ್, ಹೋಸೂರು ರಂಗಪ್ಪ, ಕೆ.ಹೆಚ್. ಹನುಮಂತಪ್ಪ, ಹೆಚ್. ಹನುಮಂತಪ್ಪ, ದಾಸರ ಬಸವರಾಜಪ್ಪ, ಡಿ. ಸುರೇಶಪ್ಪ, ಹೆಚ್. ಪರಮೇಶಗೌಡ, ಜಿ. ಪರಮೇಶಪ್ಪ, ಎಂ. ಹನುಮಂತಪ್ಪ, ಎಲ್ಐಸಿ. ಹನುಮಂತ, ಬಿ. ಕೃಷ್ಣಪ್ಪ, ಟಿ.ಆರ್‌. ಹನುಮಗೌಡ ಹಾಗೂ ಇತರರು ಈ ವೇಳೆ ಹಾಜರಿದ್ದರು. ಸಂಘದ ಕಾರ್ಯದರ್ಶಿ ಡಿ. ಶಾಂತಪ್ಪ ಸ್ವಾಗತಿಸಿದರು. 

error: Content is protected !!