ನಂದಿಬೇವೂರು ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆ

ನಂದಿಬೇವೂರು ಪ್ರಾಥಮಿಕ  ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆ

ಹರಪನಹಳ್ಳಿ,ಡಿ.31- ನಂದಿಬೇವೂರು ಗ್ರಾಮದ ವಿವಿಧೋದ್ಧೇದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ  ಚುನಾವಣೆಯಲ್ಲಿ ನಂದಿಬೇವೂರು ಗ್ರಾಮದ ರೇವಣಸಿದ್ದಪ್ಪ ಅವರ ಬೆಂಬಲಿಗ   7 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 

12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಸಾಲಗಾರರ ಕ್ಷೇತ್ರದ ಒಟ್ಟು ಮತಗಳು 519, ಇದರಲ್ಲಿ ಚಲಾವಣೆಗೊಂಡ ಮತಗಳು 498.ಸಾಲಗಾರರಲ್ಲದ  ಕ್ಷೇತ್ರದ ಒಟ್ಟು ಮತಗಳು 28, ಚಲಾವಣೆಗೊಂಡ ಮತಗಳು 27.   ಅಭ್ಯರ್ಥಿಗಳಾದ ಹೆಚ್.ಅಶೋಕಗೌಡ, ಕೆಸರಳ್ಳಿ ಕರಿಬಸಪ್ಪ, ಗಂಗಮ್ಮ, ದಸ್ಮಾಪುರ ವೀರಣ್ಣ, ಎ.ಹೆಚ್.ಶಂಕ್ರಪ್ಪ,  ಚಿಗಟೇರಿ ನಾಗಮ್ಮ, ಚನ್ನವೀರಮ್ಮ, ಕುರುಬರ ಶಿವಪ್ಪ, ಉಜ್ಜಳ್ಳಿ ಜಗದೀಶ, ಪೂಜಾರ್ ಹನುಮಪ್ಪ, ಹರಿಜನ ಚಾರೆಪ್ಪ, ಎಂ.ಪರಮೇಶ ಇವರುಗಳು ಚುನಾಯಿತರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೆ.ಮಂಜುನಾಥ ತಿಳಿಸಿದ್ದಾರೆ.

ಈ ವೇಳೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಣವಿಹಳ್ಳಿ ಮಂಜುನಾಥ, ಕೊಂಗನಹೊಸೂರು ಶಿವಪ್ಪ, ಉತ್ತಂಗಿ ರಾಮನಗೌಡ, ಕೊಟ್ರಯ್ಯ, ಬ್ಯಾಲಾಳ್ ಈರಣ್ಣ, ಹಾವನೂರು ಪ್ರಕಾಶ್, ಸಹಕಾರಿ ಸಂಘದ ಕಾರ್ಯದರ್ಶಿ ಕೆ.ಎಸ್.ಶಿವಕುಮಾರ್  ಸೇರಿದಂತೆ ಅನೇಕರು ಹಾಜರಿದ್ದರು. 

error: Content is protected !!