ಹರಿಹರ, ಡಿ. 31 – ನಗರದ ಹೊಸ ಭರಂ ಪುರ ಬಡಾವಣೆಯ ನೂರ ಎಂಟು ಲಿಂಗೇಶ್ವರ ದೇವಸ್ಥಾನದ ಸ್ವಾಮಿಗಳಾದ ಶರಣ ಡಾ. ಶ್ರೀ ಬಸವಲಿಂಗ ಮಹಾಸ್ವಾಮಿಗಳವರ (ಸೊಲ್ಲಾಪುರ) ಹುಟ್ಟು ಹಬ್ಬವನ್ನು ಜನವರಿ 1 ರಂದು ಅದ್ಧೂರಿ ಯಾಗಿ ಆಚರಣೆ ಮಾಡಲಾಗುತ್ತದೆ ಎಂದು ನೂರ ಎಂಟು ಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಬೆಣ್ಣೆ ರೇವಣಸಿದ್ದಪ್ಪ ತಿಳಿಸಿದರು.
108 ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು. 108 ಲಿಂಗೇಶ್ವರ ದೇವಸ್ಥಾನದ ಗುರುಗಳಾದ ಶ್ರೀ ಶರಣ ಡಾ. ಬಸವಲಿಂಗ ಶ್ರೀ ಗಳು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿ ರುವ ಹಿನ್ನೆಲೆಯಲ್ಲಿ ಶ್ರೀಗಳ ಜನ್ಮದಿನದ ಪ್ರಯುಕ್ತ ಬೆಳಗ್ಗೆ ಶ್ರೀ ನೂರ ಎಂಟು ಲಿಂಗೇಶ್ವರ, ಬಸವೇಶ್ವರ, ನವಗ್ರಹ, ಆಂಜನೇಯ, ಗಣಪತಿ, ಕುಂಬಳೇಶ್ವರ, ವೆಂಕಟೇಶ್ವರ, ಸುಬ್ರಹ್ಮಣ್ಯ, ಮೂಕ ಬಸವೇಶ್ವರ ದೇವರುಗಳಿಗೆ ವಿಶೇಷ ಪೂಜೆಯನ್ನು ಭಕ್ತರ ಸಮ್ಮುಖದಲ್ಲಿ ಮಾಡಲಾಗುತ್ತದೆ. ನಂತರ ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಶ್ರೀಗಳು ಹಾಗೂ ಸರ್ವೋದಯ ಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಎಸ್. ರಾಮಪ್ಪ, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುವರು. ಜನವರಿ 2 ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶರಣ ಡಾ. ಬಸವಲಿಂಗ ಶ್ರೀಗಳು ಮಾತ ನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಜಿ. ನಂಜಪ್ಪ, ಖಜಾಂಚಿ ಬೆಣ್ಣೆ ಸಿದ್ದೇಶ್, ಉಪಾಧ್ಯಕ್ಷ ಹರಪನಹಳ್ಳಿ ಬಸವ ರಾಜಪ್ಪ, ಕಾರ್ಯದರ್ಶಿ ಮಾಲತೇಶ್, ಸಹ ಕಾರ್ಯದರ್ಶಿ ಕೆ.ಜಿ. ಶಿವಕುಮಾರ್, ಸದಸ್ಯರಾದ ಗಜೇಂದ್ರ, ಕರಿಬಸಪ್ಪ ಕಂಚಿಕೇರಿ, ಮುರಿಗೆಮ್ಮ , ಹಾವನೂರು ಈರಣ್ಣ, ಮಜ್ಜಿಗೆ ಚಂದ್ರಪ್ಪ, ನೀಲಗುಂದ್ ಪರಮೇಶ್ವರಪ್ಪ, ಬೆಟ್ಟಪ್ಪ, ಪಂಡಿತ ರುದ್ರಯ್ಯ, ಅರ್ಚಕ ಮಹಾರುದ್ರಪ್ಪ ಸೇರಿದಂತೆ ಇತರರಿದ್ದರು.