ಶ್ರೀ ಶರಣ ಬಸವಲಿಂಗ ಸ್ವಾಮೀಜಿ 75ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್
ಹರಿಹರ, ಜ.1- ಶ್ರೀ ಶರಣ ಬಸವಲಿಂಗ ಶ್ರೀಗಳು ತಮ್ಮ ಜ್ಞಾನ ಹಾಗೂ ಶಕ್ತಿಯ ಬಲದಿಂದ 256 ಅನುಷ್ಠಾನಗಳನ್ನು ಮಾಡಿ ರಾಷ್ಟ್ರೀಯ ಶ್ರೇಷ್ಠ ಸಂತರಾಗಿ ಹೊರಮ್ಮಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಹೇಳಿದರು.
ನಗರದ ಹೊಸಭರಂಪುರ ಬಡಾವಣೆಯ ನೂರಾ ಎಂಟು ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ದಾನಮ್ಮ ದೇವಿಯ ಪುರಾಣ ಮಂಗಲೋತ್ಸವ ಹಾಗೂ ಶ್ರೀ ಶರಣ ಬಸವಲಿಂಗ ಸ್ವಾಮಿಗಳವರ 75 ನೇ ಹುಟ್ಟು ಹಬ್ಬದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸೊಲ್ಲಾಪುರ ನಗರದಲ್ಲಿ ಬಹಳಷ್ಟು ಪ್ರಚಲಿತ ವಾಗಿರುವ ಶರಣ ಶ್ರೀ ಬಸವಲಿಂಗ ಶ್ರೀಗಳವರನ್ನು ಹರಿಹರ ನಗರಕ್ಕೆ ಕರೆ ತರುವುದರೊಂದಿಗೆ ಅವರ ಹುಟ್ಟು ಹಬ್ಬದ ಆಚರಣೆಯನ್ನು ಅದ್ದೂರಿಯಾಗಿ ಮಾಡುತ್ತಿರುವುದು ಸಂತಸದ ವಿಚಾರ ಎಂದರು. ಎಲ್ಲಾ ಧರ್ಮಗಳು ಶ್ರೇಷ್ಠವಾಗಿವೆ. ಆದರೆ ಧರ್ಮ ಸಂಘರ್ಷ ಹೋಗಬೇಕಾದರೆ, ಯಾವುದೇ ಮಠದ ಶ್ರೀಗಳೇ ಇರಲಿ ರಾಜಕೀಯದಿಂದ ಹೊರಗಡೆ ಇದ್ದು, ಜನರಿಗೆ ಸನ್ಮಾರ್ಗ, ಸಂಸ್ಕಾರ ನೀಡಿದಾಗ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಶ್ರೀ ಶರಣ ಬಸವಲಿಂಗ ಸ್ವಾಮಿಗಳು ಮಾತ ನಾಡಿ, ನಾವೆಲ್ಲರೂ ಧರ್ಮದಿಂದ, ಸತ್ಯದಿಂದ, ಪೂಜೆ, ಧ್ಯಾನ ಮಾಡುತ್ತ ಬದುಕೋಣ, ಧರ್ಮವನ್ನು ರಕ್ಷಣೆ ಮಾಡಿ, ಅದನ್ನು ಎತ್ತಿ ಹಿಡಿಯುವಂತಹ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂದು ಹೇಳಿದರು.
ಒಳ್ಳೆಯ ಕೆಲಸವನ್ನು ಮಾಡಬೇಕಾದರೆ ಜನರ ಸಹಕಾರದ ಅವಶ್ಯಕತೆ ಇರುತ್ತದೆ. ಸಮಿತಿಯ ಸದಸ್ಯರು ನಿಷ್ಟೆಯಿಂದ ಸೇವೆಯನ್ನು ಮಾಡುವುದಕ್ಕೆ ಮುಂದಾದರೆ, ಇಲ್ಲಿನ ಮಠವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದಕ್ಕೆ ನಾನು ಸಿದ್ದನಿದ್ದು, ನನಗೆ ಸೊಲ್ಲಾಪುರ ಸ್ವಾಮೀಜಿ ಅನ್ನುವುದಕ್ಕಿಂತ, ನೂರಾ ಎಂಟು ಲಿಂಗೇಶ್ವರ ಸ್ವಾಮಿಗಳು ಎನ್ನುವಂತಹ ಹೆಸರೇ ಹೆಚ್ಚು ಪ್ರಚಲಿತದಲ್ಲಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ದೇವಸ್ಥಾನ ಅಭಿವೃದ್ಧಿ ಆಗಬೇಕಾದರೆ ಆದಾಯದ ಮೂಲ ಬಹಳಷ್ಟು ಅತ್ಯವಶ್ಯಕವಾಗಿದೆ. ಹಾಗಾಗಿ ದೇವಸ್ಥಾನಕ್ಕೆ ಆದಾಯ ಬರುವ ನಿಟ್ಟಿನಲ್ಲಿ ಮಳಿಗೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿರುವುದು ಸಂತಸದ ವಿಚಾರ. ಇದಕ್ಕೆ ನನ್ನ ಕಡೆಯಿಂದ ಆಗುವ ಸಹಕಾರ ನೀಡುವುದಾಗಿ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ. ಜೆ. ಶಿವಾನಂದಪ್ಪ, ನಗರಸಭೆ ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ನಗರಸಭೆ ಸದಸ್ಯ ಕೆ.ಬಿ. ರಾಜಶೇಖರ್, ಎಸ್.ಎಸ್.ಕೆ. ಸಮಾಜದ ಉಪಾಧ್ಯಕ್ಷ ಪರಶುರಾಮ್ ಕಾಟ್ವೆ, ಮಂಜುನಾಥ್ ಅಪ್ಪಜ್ಜಿ ಮಾತನಾಡಿದರು.
ಸರ್ವೋದಯ ಮಠದ ಶ್ರೀ ಶಿವಕುಮಾರ ಸ್ವಾಮಿಗಳು, ಪಂಚಾಕ್ಷರಿ ಮಠದ ಶ್ರೀಗಳು, ನಿಂಬಕ್ಕ ಚಂದಪೂರ್, ಜ್ಯೋತಿ ಪ್ರಕಾಶ್, ಜೆ.ನಂಜಪ್ಪ, ಹೊಸಪೇಟೆ ವೆಂಕಟೇಶ್, ಬೆಣ್ಣೆ ರೇವಣಸಿದ್ದಪ್ಪ, ಪಿ.ಎನ್. ವಿರೂಪಾಕ್ಷಪ್ಪ, ನಾಗರಾಜ್ ಕುರುವತ್ತಿ, ಪರಶುರಾಮ್ ಕಾಟ್ವೆ, ಕಂಚಿಕೇರಿ ಶಿವಕುಮಾರ್, ಹಾವನೂರು ಮಹಾರುದ್ರಪ್ಪ, ಕಂಚಿಕೇರಿ ಕರಿಬಸಪ್ಪ, ಮಹಾಂತೇಶ್, ಬೆಣ್ಣೆ ಸಿದ್ದೇಶ್, ಮಜ್ಜಿಗೆ ಚಂದ್ರಪ್ಪ, ಪರಮೇಶ್ವರಪ್ಪ, ಹರಪನಹಳ್ಳಿ ಬಸವರಾಜ್, ಹಿರೇಬಿದರಿ ಕೊಟ್ರೇಶಪ್ಪ, ಈರಣ್ಣ ಹಾವನೂರು, ಗಜೇಂದ್ರ, ಬೆಟ್ಟಪ್ಪ, ಅಮರಾವತಿ ನಾಗರಾಜ್, ಅಡಕಿ ಕುಮಾರ್, ಶಿವಕುಮಾರ್, ರಾಜು ವೆಲ್ಡಿಂಗ್ ಇತರರು ಉಪಸ್ಥಿತರಿದ್ದರು.
ರಾಜಶೇಖರ ಸಂಗಳಕರ ಹುಬ್ಬಳ್ಳಿ ಪ್ರಾರ್ಥಿಸಿದರು. ಶಶಿಕುಮಾರ್ ತಾಳಿಕೋಟಿ ಸ್ವಾಗತಿಸಿದರು. ಉಪನ್ಯಾಸಕ ಗುರುಬಸವರಾಜಯ್ಯ ನಿರೂಪಿಸಿದರು. ಕಂಚಿಕೇರಿ ಕೆ.ಜಿ ಶಿವಕುಮಾರ್ ವಂದಿಸಿದರು.