ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ಸರ್ಕಾರ ಬೊಕ್ಕಸದ ಹಣ ಕೊಡಬೇಕಾಗಿಲ್ಲ

ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ಸರ್ಕಾರ ಬೊಕ್ಕಸದ ಹಣ ಕೊಡಬೇಕಾಗಿಲ್ಲ

ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು

ದಾವಣಗೆರೆ, ಡಿ. 30- ರಾಜ್ಯದಲ್ಲಿ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತಂದರೆ ಸರ್ಕಾರ ಬೊಕ್ಕಸದ ಹಣ ಕೊಡಬೇಕಾಗಿಲ್ಲ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಹಾಗೂ ಟೈಲರ್ ಫೆಡರೇಶನ್ ನ ರಾಜ್ಯ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಹೇಳಿದರು. 

ಟೈಲರ್ ಕಲ್ಯಾಣ ಮಂಡಳಿಗೆ ಟೆಕ್ಸ್‌ಟೈಲ್ಸ್ ಮಿಲ್ಸ್, ಗಾರ್ಮೆಂಟ್ಸ್, ಬಟ್ಟೆ ಅಂಗಡಿಗಳು ಹಾಗೂ ಬಟ್ಟೆ ಹೊಲಿಗೆಗೆ ಪೂರಕವಾಗಿ ಉತ್ಪನ್ನ ಮಾಡುವ ಸರಕುದಾರ ಉತ್ಪಾದಕರಿಂದ 2% ಸೆಸ್ ಸಂಗ್ರಹ ಮಾಡುವ ಮೂಲಕ ಬರುವ ಬಜೆಟ್ ನಲ್ಲಿ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತಂದು ರಾಜ್ಯಾದ್ಯಂತ ಇರುವ ಸುಮಾರು 15 ಲಕ್ಷ ಟೈಲರ್‌ಗಳ ಕುಟುಂಬಗಳಿಗೆ ನೆರವಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಜಯದೇವ ಮುರುಘರಾಜೇಂದ್ರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಟೈಲರ್‌ಗಳು ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರಬೇಕೆಂದು ಘೋಷಣೆ ಕೂಗುತ್ತಾ ಅಶೋಕ ರಸ್ತೆ, ಗಾಂಧಿ ಸರ್ಕಲ್, ಹಳೆ ನಿಲ್ದಾಣ ರಸ್ತೆ ಮೂಲಕ ಸಾಗಿ ಎಸಿ ಕಚೇರಿಗೆ ತೆರಳಿ, ಮುಖ್ಯಮಂತ್ರಿಗಳು, ಕಾರ್ಮಿಕ ಮಂತ್ರಿಗಳು ಮತ್ತು ಜವಳಿ ಖಾತೆ ಸಚಿವರಿಗೆ ಎಸಿ ಕಚೇರಿ ಮೂಲಕ ಮನವಿ ಸಲ್ಲಿಸಿದರು.

ರಾಜ್ಯ ಉಪಾಧ್ಯಕ್ಷರಾದ ರಮೇಶ್ ಸಿ. ದಾಸರ,  ಸಂಚಾಲಕರಾದ ಗದಿಗೇಶ ಪಾಳೇದ, ಸರೋಜ ಕೆ.ಎಂ. ಚನ್ನಪ್ಪ ಗುಮ್ಮನೂರು, ಐರಣಿ ಚಂದ್ರು, ಮಹಮದ್ ರಫೀಕ್, ಟೈಲರ್ ಮುಖಂಡರುಗಳಾದ ನಾಗರತ್ನಮ್ಮ, ಸ್ಮಿತಾ, ಉಷಾ, ಬಸಮ್ಮ, ದಯಾನಂದ, ರಾಮು, ಅಶೋಕ, ಮರಿಯಪ್ಪ, ನಾಗರತ್ನಮ್ಮ, ಕಾವೇರಿ, ವೀಣಾ, ಪುಷ್ಪಾ ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!