ನಗರದಲ್ಲಿ ಇಂದಿನಿಂದ ಕಲಬುರಗಿಯ ಶರಣ ಬಸವೇಶ್ವರರ ಪುರಾಣ ಪ್ರವಚನ

ನಗರದಲ್ಲಿ ಇಂದಿನಿಂದ ಕಲಬುರಗಿಯ ಶರಣ ಬಸವೇಶ್ವರರ ಪುರಾಣ ಪ್ರವಚನ

ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಇಂದಿನಿಂದ ಜನವರಿ 31 ರವರೆಗೆ ಪಂಡಿತ್ ಪುಟ್ಟರಾಜ ಕವಿ ಗವಾಯಿ ವಿರಚಿತ ಕಲಬುರಗಿಯ ಮಹಾದಾಸೋಹಿ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಾಣ ಪ್ರವಚನ ಸಮಿತಿಯ ಅಜ್ಜಂಪುರ ಶೆಟ್ರು ಮೃತ್ಯುಂಜಯ ಅವರು ತಿಳಿಸಿದರು.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಮಂಜುನಾಥ ಶಾಸ್ತ್ರಿ ಇಂದಿ ನಿಂದ ಪ್ರತಿ ದಿನ ಸಂಜೆ 6.30 ರಿಂದ 9 ಗಂಟೆಯವ ರೆಗೆ ಪುರಾಣ ಪ್ರವಚನ ನಡೆಸಿಕೊಡಲಿದ್ದು, ಹುಚ್ಚಯ್ಯಸ್ವಾಮಿ ಹಾಗೂ ವೀರೇಶ್ ಹಿರೇಮಠ ಅವರು ಸಹಕಾರ ನೀಡಲಿದ್ದಾರೆಂದರು. ಇಂದು ಸಂಜೆ 6.30ಕ್ಕೆ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ನೇತೃತ್ವ ವಹಿಸುವರು. ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಅಥಣಿ ಎಸ್. ವೀರಣ್ಣ, ಮಾಗಾನಹಳ್ಳಿ ಜಯದೇವಪ್ಪ, ರುದ್ರೇಶ್ ಉಜ್ಜಿನಿಕೊಪ್ಪ, ಸರೋಜಮ್ಮ, ನಿಜಲಿಂಗಪ್ಪ ಕಡೇಕೊಪ್ಪ, ಶಿವಕುಮಾರ್, ರುದ್ರಣ್ಣ, ಡಿ. ನಾಗರಾಜಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

error: Content is protected !!