ಹುಲಿಗೆಮ್ಮ ದೇವಿಯ ಕಾರ್ತಿಕ ಸಂಪನ್ನ

ಹುಲಿಗೆಮ್ಮ ದೇವಿಯ ಕಾರ್ತಿಕ ಸಂಪನ್ನ

ದಾವಣಗೆರೆ, ಡಿ. 29 – ಇಲ್ಲಿನ ಗಾಂಧಿನಗರದಲ್ಲಿರುವ ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿಯಿಂದ ಶ್ರೀ ಹುಲಿಗೆಮ್ಮ ದೇವಿಯ ಕಡೆ ಕಾರ್ತಿಕೋತ್ಸವ ಕಾರ್ಯಕ್ರಮವು ಮಂಗಳವಾರ ರಾತ್ರಿ ಸಂಪನ್ನಗೊಂಡಿತು.

ಅಮ್ಮನವರ ದೇವಸ್ಥಾನದಲ್ಲಿ ಸುಮಾರು 32×20 ಅಡಿ ಅಳತೆಯ ಬೃಹತ್ ಕದಳಿ(ಬಾಳೆ ಕಂದು) ಮಹಾಮಂಟಪವನ್ನು ನಿರ್ಮಿಸಲಾಗಿತ್ತು. ಕಲಾವಿದ ವೈ.ಬಿ.ರಘುನಾಥ ಮತ್ತು ತಂಡದವರಿಂದ ಮಹಾ ಮಂಟಪ ನಿರ್ಮಿಸಿ ಅದರಲ್ಲಿ ಶ್ರೀ ಹುಲಿಗೆಮ್ಮ ದೇವಿ ಪ್ರತಿಷ್ಠಾಪಿಸಲಾಗಿತ್ತು.  ಮಂಗಳವಾರ ಸಂಜೆ ಸಮಿತಿಯ ಗಂಗಾ ಧರಪ್ಪ, ತ್ಯಾಗರಾಜ, ಚಂದ್ರಮ್ಮ, ಶಿವಮೂರ್ತಿ, ಮಂಜಪ್ಪ   ಸದ್ಭಕ್ತರ ಸಮ್ಮುಖದಲ್ಲಿ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವ ಆಚರಿಸಲಾಯಿತು.

error: Content is protected !!