ದಾವಣಗೆರೆ, ಡಿ. 29 – ಬರುವ ಜನವರಿ 4 ಮತ್ತು 5 ರಂದು ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಲೋಗೋವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಬೆಂಗಳೂರಿನ ಗೃಹ ಕಚೇರಿಯಲ್ಲಿ ಸೋಮವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮೇಯರ್ ಚಮನ್ ಸಾಬ್, ದೂಡ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ದೂಡ ಆಯುಕ್ತ ತಿಮ್ಮಣ್ಣ ಹುಲ್ಲುಮನೆ, ಯುವಜನ ಸೇವೆ ಇಲಾಖೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ, ಸಮರ್ಥ ಶಾಮನೂರು, ಪಾಲಿಕೆ ಸದಸ್ಯರಾದ ಸಾಗರ್ ಎಲ್.ಹೆಚ್., ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತರಾದ ಮಂಜುನಾಥ್ ಮಾಗನಹಳ್ಳಿ ಶಂಭು ಉರೇಕೊಂಡಿ, ಶಿವರತನ್, ರಂಗಸ್ವಾಮಿ, ತಾಹಿರ್, ಮುಜಾಹಿದ್ ಪಾಷ, ನವೀನ್ ಕಕ್ಕರಗೊಳ್ಳ, ತಿಪ್ಪೇಶ್ ಮತ್ತಿತರರು ಹಾಜರಿದ್ದರು.