ವಾಲ್ಮೀಕಿ ಜಯಂತಿ ಸಮುದಾಯದಲ್ಲಿ ವೈಚಾರಿಕ ಕ್ರಾಂತಿ ಬಿತ್ತಬೇಕು

ವಾಲ್ಮೀಕಿ ಜಯಂತಿ ಸಮುದಾಯದಲ್ಲಿ ವೈಚಾರಿಕ ಕ್ರಾಂತಿ ಬಿತ್ತಬೇಕು

ಹರಪನಹಳ್ಳಿ, ಡಿ. 29 – ವಾಲ್ಮೀಕಿ ಜಾತ್ರೆ ಸಮುದಾಯದಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವ ನಿರಂತರ ಕಾಯಕವಾಗಿದೆ ಎಂದು ರಾಜನ ಹಳ್ಳಿಯ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ  ಶ್ರೀ ಮಠದ 27ನೇ ವಾರ್ಷಿಕೋತ್ಸವ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿ, 18ನೇ ವರ್ಷದ ಪುಣ್ಯಾರಾಧನೆ, ಜಗದ್ಗುರು ಶ್ರೀ ಪ್ರಸನ್ನಾನಂದ ಮಹಾ ಸ್ವಾಮೀಜಿ, 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಾಗೂ 7ನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ವಾಲ್ಮೀಕಿ ನಾಯಕ ಸಮೂದಾಯ  ಸ್ವಾತಂತ್ರ್ಯ ಪೂರ್ವದಲ್ಲಿ ಈ ರಾಜ್ಯ ಮತ್ತು ರಾಷ್ಟ್ರಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಈ ರಾಜ್ಯದ ಸಮಸ್ತ ಬೇಡ, ವಾಲ್ಮೀಕಿ, ನಾಯಕ ಸಮೂದಾಯದವರು ರಾಜ್ಯ ಮಟ್ಟದಲ್ಲಿ ವರ್ಷಕೊಮ್ಮೆಯಾದರೂ ಒಂದು ಕಡೆ ಸೇರಿಕೊಂಡು ಸಂಘಟನೆಯಾಗಲಿ, ಆ ಮುಖೇನವಾದರೂ ಸಮೂದಾಯದಲ್ಲಿ ಜಾಗೃತಿ ಬರಲಿ ಎಂದು ವಾಲ್ಮೀಕಿ ಜಾತ್ರಾ ಮಹೋತ್ಸವದ ಸಮಾವೇಶ ಮಾಡಲಾಗುತ್ತಿದೆ ಎಂದರು.

ವಾಲ್ಮೀಕಿ ನಾಯಕ ಸಮುದಾಯ ಈ ನಾಡು, ನುಡಿಗೆ  ತನ್ನದೆ ಆದ ಕೋಡುಗೆ ನೀಡಿದೆ. ಇಂತಹ ಭವ್ಯ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಸಮುದಾಯ ಜಾತ್ರೆಯ ಮೂಲಕ ಜಾಗೃತರಾಗಬೇಕಿದೆ. ಜಾತ್ರೆಗಳು ಜಾತ್ಯಾತೀತ ಮನೋಭಾವನೆಯ ಮೂಲಕ ಎಲ್ಲರಲ್ಲೂ ಸಾಮರಸ್ಯ ಬೆಸೆಯುವ ಕೊಂಡಿಯಾಗಿದ್ದು ಅದನ್ನು ಇಂದಿಗೂ ಸಹ ಆಚರಿಸಿಕೊಂಡು ಮುಂದುವರೆಯುತ್ತಿವೆ.

ನಮ್ಮನ್ನಾಳುವ ಎಲ್ಲ ಪಕ್ಷಗಳ ಸರ್ಕಾರಗಳು ಈ ಸಮುದಾಯದ ಅಸಂಘಟನೆ ಮತ್ತು ರಾಜಕೀಯ ಇಚ್ಚಾಶಕ್ತಿಯನ್ನು ನಮ್ಮ ದೌರ್ಬಲ್ಯವೆಂದು ತಿಳಿದು ಚುನಾವಣೆಗಳು ಬಂದಾಗ ಮಾತ್ರ ನಮ್ಮ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ನಮ್ಮ ಹಿತವನ್ನು ಮರೆತು ಬಿಡುತ್ತವೆ. ಹಾಗಾಗಿ ನಾವೆಲ್ಲರೂ ಈ ಜಾತ್ರೆಯ ಮೂಲಕ ಜಾಗೃತರಾಗಬೇಕು, ಸಂಘಿಟಿತರಾಗಬೇಕು ಎಂದರು. ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಇದ್ದು  ಕಳೆದ 15 ವರ್ಷಗಳಿಂದ 28 ಜಿಲ್ಲೆಗಳು ಹಾಗೂ 175 ತಾಲ್ಲೂಕುಗಳ ಪ್ರವಾಸ ಮಾಡಿ ಜಾತ್ರೆಗೆ ಆಹ್ವಾನ ನೀಡುವ ಮೂಲಕ ರಾಜ್ಯದ 4ನೇ ಅತಿ ದೊಡ್ಡ ಸಮುದಾಯವನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಕೂಡ ಜಾತ್ರೆ ಯಶಸ್ವಿಯಾಗಲು ನಿಮ್ಮಗಳ ಸಹಕಾರ ಅಗತ್ಯವಾಗಿದೆ ಎಂದರು.

ಇದೆ ವೇಳೆ ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಹಿರೆಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ ಅವರನ್ನ ಸರ್ವಾನು ಮತದಿಂದ  ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಶಿರಹಟ್ಟಿ ದಂಡೆಪ್ಪ, ಗೌರವ ಅಧ್ಯಕ್ಷ ಹೆಚ್.ಕೆ. ಹಾಲೇಶ್, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ,  ಪ್ರಧಾನ ಕಾರ್ಯದರ್ಶಿ ಜಿಟ್ಟಿನಕಟ್ಟಿ ಎಚ್.ಕೆ. ಮಂಜುನಾಥ, ಮುಖಂಡ ಬಾಣದ ಅಂಜಿನಪ್ಪ, ತೆಲಗಿ ಟಿ. ಉಮಾಕಾಂತ,ಇಟ್ಟಿಗುಡಿ ಅಂಜಿನಪ್ಪ, ಆಲದಹಳ್ಳಿ ಷಣ್ಮೂಖಪ್ಪ,  ಎಂ.ಪ್ರಾಣೇಶ್, ನೀಲಗುಂದ ವಾಗೀಶ್, ಶಿವಾನಂದ,  ಗಿರಜ್ಜಿ ನಾಗರಾಜ,   ಬಾಗಳಿ ಆನಂದಪ್ಪ, ತೆಲಿಗಿ ಅಂಜಿನಪ್ಪ, ಶಿವಪ್ಪ, ಯಡಿಹಳ್ಳಿ ರಾಮಪ್ಪ, ತೆಲಿಗಿ ಕೆ. ಯೊಗೇಶ, ದುಗ್ಗಾವತಿ ಮಂಜುನಾಥ, ಪೈಲ್ವಾನ ಬಸಪ್ಪ, ರಂಗಾಪುರ ಶಿವರಾಜ, ದ್ಯಾಮಜ್ಜಿ ಹನುಮಂತಪ್ಪ, ಗಿಡ್ಡಳ್ಳಿ ನಾಗರಾಜ, ಮೈದೂರು ಮಾರುತಿ, ರಾಯದುರ್ಗದ ಪ್ರಕಾಶ, ಗುಡೆಕೋಟಿಕೇರಿ ರಾಜಪ್ಪ ಪೂಜಾರ್ ಅರುಣಕುಮಾರ, ಹುಲಿಕಟ್ಟಿ ಲಕ್ಯೆಪ್ಪ, ಚಿಕ್ಕೇರಿ ಬಸಪ್ಪ, ಮತ್ತಿಹಳ್ಳಿ ಕರಿಬಸಪ್ಪ, ಟಿ. ಪದ್ಮಾವತಿ, ಮಂಜುಳಾ, ಶೋಭಾ, ಗುಂಡಗತ್ತಿ ನೇತ್ರಾವತಿ, ಆಲೂರು ಶ್ರೀನಿವಾಸ, ಆರ್. ಪ್ರಕಾಶ್, ಆರ್. ಲೋಕೇಶ್, ನಿಟ್ಟೂರು ಸಣ್ಣಹಾಲಪ್ಪ,  ಕೆಂಚನಗೌಡ, ರೇವಣಸಿದ್ದಪ್ಪ, ಎಚ್. ಶಿವರಾಜ,  ಕೆಂಗಳ್ಳಿ ಪ್ರಕಾಶ್, ಮೈದೂರು ಮಾರುತಿ, ಮಹಾಂತೇಶ್,  ಸೇರಿದಂತೆ ಇತರರು ಇದ್ದರು.

error: Content is protected !!