ದಾವಣಗೆರೆ, ಡಿ. 29 – ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ದಾವಣಗೆರೆ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸುರೇಶ್ ಆರ್. ಕುಣಿಬೆಳಕೆರೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಮತ್ತು ಕೇಂದ್ರ ಸಂಘದ ನಾಮ ನಿರ್ದೇಶನ ಸದಸ್ಯ ಬಿ. ವಾಸುದೇವ, ಕೆ.ಜೈಮುನಿ, ಸಹ ಕಾರ್ಯ ದರ್ಶಿ ಆರ್. ರವಿ, ಸಂಘಟನಾ ಕಾರ್ಯ ದರ್ಶಿ ಹೆಚ್.ಸುಧಾಕರ ನೇತೃತ್ವದಲ್ಲಿ ಸೇರಿದ ಸಭೆಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಜೆ.ಎಸ್. ವೀರೇಶ್, ಕೆ.ಆರ್.ಗಂಗರಾಜು, ಬಿ.ಓ. ಕರಿಯಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಗೋವರ್ಧನ್ ಗಿರಿ ಶ್ಯಾಮ್ ಎನ್.ಆರ್, ಖಜಾಂಚಿಯಾಗಿ ಶಿವಮೂರ್ತಿ ಟಿ.ಜಿ, ಕಾರ್ಯದರ್ಶಿಯಾಗಿ ಅಣಬೂರು ಮಠದ ಕೊಟ್ರೇಶ್ ಆಯ್ಕೆಯಾಗಿದ್ದಾರೆ.
ಜೆ.ಹೆಚ್. ಗೋವಿಂದರಾಜು, ಹೆಚ್.ವೆಂಕಟೇಶ್, (ಕೊಡಗನೂರು), ಸಹ ಕಾರ್ಯದರ್ಶಿ ಮಾರಪ್ಪ ಎ.ಕೆ, ಅನಿಲ್ ಕುಮಾರ್ ವಿ. ಬಾವಿ, ನಂದನ್ ಕುಮಾರ್, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್ ಜಿ.ಎಸ್. ಸಂಘಟನಾ ಕಾರ್ಯದರ್ಶಿ ಎನ್. ಈಶ್ವರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಓ. ಮಾರುತಿ, ಪ್ರಶಾಂತ್ ಆರ್.ಟಿ. ದುಗ್ಗತ್ತಿ ಮಠ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.