ದಾವಣಗೆರೆ, ಡಿ. 29 – ಮಹಾನಗರ ಪಾಲಿಕೆಯ ವಿವಿಧ ವಾರ್ಡುಗಳಲ್ಲಿ ಬಹಳ ದಿನಗಳಿಂದ ಸಂಗ್ರಹವಾಗಿರುವ ಕಟ್ಟಡ ತ್ಯಾಜ್ಯ ಹಾಗೂ ಇತರೆ ಅನುಪಯುಕ್ತ ತ್ಯಾಜ್ಯಗಳನ್ನು ಗುತ್ತಿಗೆದಾರರ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಲಾಗಿದೆ.
ಪಾಲಿಕೆಯ ಮೇಯರ್ ಚಮನ್ ಸಾಬ್.ಕೆ, ಆಯುಕ್ತರಾದ ರೇಣುಕಾ, ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ಉಮಾಶಂಕರ್, ಪಾಲಿಕೆಯ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.