`ಆಧ್ಯಾತ್ಮಿಕ ಶುಭಾಶಯ ರತ್ನ’ ಕೃತಿ ಲೋಕಾರ್ಪಣೆ

`ಆಧ್ಯಾತ್ಮಿಕ ಶುಭಾಶಯ ರತ್ನ’  ಕೃತಿ ಲೋಕಾರ್ಪಣೆ

ದಾವಣಗೆರೆ, ಡಿ. 29- ನಗರದ ಸಾಹಿತ್ಯ ಸಂಗ್ರಹದ ಬರಹಗಾರರಾದ ನಲ್ಲೂರು ಲಕ್ಷ್ಮಣ್‍ರಾವ್ ನರಹರಿ ರೇವಣಕರ್‌ ಅವರ `ಆಧ್ಯಾತ್ಮಿಕ ಶುಭಾಶಯ ರತ್ನ’ ಬೃಹತ್ ಗ್ರಂಥವನ್ನು ಇತ್ತೀಚಿಗೆ ನಗರದ ವಿನೋಬನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಉಡುಪಿ ಜಿಲ್ಲೆಯ ಸೊದೆ ಮಠದ ಶ್ರೀ  ವಿಶ್ವವಲ್ಲಭವತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.

ಸೋದೆ ಶ್ರೀ ಗುರು ವಾದಿರಾಜಮಠ ದೈವಜ್ಞ ಬ್ರಾಹ್ಮಣರ ಶಿಷ್ಯ ವೃಂದದ ದಾವಣಗೆರೆ ಜಿಲ್ಲಾ ಸಮಿತಿ ಅಧ್ಯಕ್ಷ ನಲ್ಲೂರು ಶಾಂತರಾವ್ ರಾಜಕುಮಾರ್, ಸಮಿತಿ ಸದಸ್ಯರಾದ ಕಮಲಾಕರ ರೇವಣಕರ್ ಗ್ರಂಥಕರ್ತರಾದ ನಲ್ಲೂರು ಲಕ್ಷ್ಮಣ್‍ರಾವ್ ನರಹರಿ ರೇವಣಕರ್, ಸಾಲಿಗ್ರಾಮ ಗಣೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.

error: Content is protected !!