ರಾಣೇಬೆನ್ನೂರು, ಡಿ. 29- ಇಲ್ಲಿನ ಸಿದ್ದಗಂಗಾ ಆಸ್ಪತ್ರೆಯ ಫಿಜಿಷಿಯನ್ ಡಾ.ಎಸ್.ಕೆ. ನಾಗರಾಜ ಅವರಿಗೆ `ವೈದ್ಯ ವಿಭೂಷಣ’ ಪ್ರಶಸ್ತಿ ಲಭಿಸಿದೆ. ಆರೋಗ್ಯ ಸೇವೆಯಲ್ಲಿನ ಶ್ರೇಷ್ಠತೆ, ಜನಪರ ಕಾಳಜಿ, ರಕ್ತದಾನ ಹಾಗೂ ಆರೋಗ್ಯ ಶಿಬಿರ ಸೇರಿದಂತೆ ಇತರೆ ಸೇವೆಗಳನ್ನು ಗುರುತಿಸಿದ ಕರ್ನಾಟಕ ಹೆಲ್ತ್ ಕೇರ್ ಸಂಸ್ಥೆಯು ಈ ಪ್ರಶಸ್ತಿ ನೀಡಿದೆ.
ಸಿಗ್ನೇಚರ್ ಮೀಡಿಯಾ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಎಸ್.ಕೆ. ನಾಗರಾಜ ಅವರು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಡಾ. ಅಂಜಿನಪ್ಪ, ಪದ್ಮಶ್ರೀ ಡಾ.ಕಾಮಿನಿ ರಾವ್, ರೇವತಿ ಕಾಮತ್, ಡಿವೈಎಸ್ಪಿ ರಾಜೇಶ್ ಎಲ್.ವೈ, ಪ್ರಶಾಂತ್ ಪ್ರಶಸ್ತಿ ಪ್ರದಾನ ಮಾಡಿದರು.