ಶ್ರೀ ವೇಮನಾನಂದ ಸ್ವಾಮೀಜಿ ಜನ್ಮದಿನ

ಶ್ರೀ ವೇಮನಾನಂದ ಸ್ವಾಮೀಜಿ ಜನ್ಮದಿನ

ಮಲೇಬೆನ್ನೂರು, ಡಿ. 22 – ವೇಮನಾನಂದ ಶ್ರೀಗಳು ಸರಳತೆ,  ಮುಂದಾಲೋಚನೆ, ಮಾತೃತ್ವ ಭಾವನೆ ಹೊಂದಿರುವಂತಹ ಸೌಮ್ಯ ಸ್ವಭಾವದ ಗುರುಗಳಾಗಿದ್ದಾರೆ ಎಂದು ಯಲವಟ್ಟಿ ಸಿದ್ದಾಶ್ರಮದ ಯೋಗಾನಂದ ಶ್ರೀಗಳು ಅಭಿಪ್ರಾಯಪಟ್ಟರು.

ಅವರು ಸಮೀಪದ ಎರೆಹೊಸಳ್ಳಿಯ ಮಹಾಯೋಗಿ ವೇಮನ ಸಂಸ್ಥಾನ ಮಠದಲ್ಲಿ ಏರ್ಪಡಿಸಿದ್ದ ಶ್ರೀ ವೇಮನಾನಂದ ಸ್ವಾಮೀಜಿಯವರ 47ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ, ಮಠದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಮಕ್ಕಳಿಗೆ ಜ್ಞಾನ ದಾಸೋಹ, ಅನ್ನ ದಾಸೋಹ ಮತ್ತು ವಸತಿ ಸೌಕರ್ಯವನ್ನು ಸುಮಾರು 10 ವರ್ಷಗಳಿಂದ ಸೇವೆ ಮಾಡುತ್ತಿರುವುದು ಸಾಮಾನ್ಯ ವಾದುದಲ್ಲ ಎಂದರಲ್ಲದೇ ಶ್ರೀಗಳವರ ಜನ್ಮ ದಿನದ ಪ್ರಯುಕ್ತ ಸಾಮಾಜಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.

ಶ್ರೀಗಳವರ ಜನ್ಮ ದಿನದ ಪ್ರಯುಕ್ತ ಮಠದ ಶ್ರೀಗಳಾದ ಡಾ. ಬಸವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟ್ ಹಾಗೂ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಗಂಗಾಪುರದ ಶ್ರೀಗಳಾದ ಮರುಳಶಂಕರ ಸ್ವಾಮೀಜಿ, ಪ್ರೀತಿ ಆರೈಕೆ ಟ್ರಸ್ಟ್‍ನ ಕಾರ್ಯದರ್ಶಿ ಡಾ. ಟಿ.ಜೆ. ರವಿಕುಮಾರ್ ಮತ್ತು ಸಿಬ್ಬಂ ದಿಗಳು, ಹೇಮ ವೇಮ ಸದ್ಭೋದನಾ ವಿದ್ಯಾಪೀಠದ ಆಡಳಿತಾಧಿಕಾರಿ ಹೆಚ್.ಪಿ. ಸುಭಾಶ್, ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಕುಂಜುರಾಣಿ, ಸಿಬ್ಬಂದಿ ಅಜುರು ದ್ಧೀನ್, ಶಿವಕುಮಾರ್, ಸ್ವಾಮಿ, ಗಂಗಾಧರ್, ಹನುಮಂತ ರೆಡ್ಡಿ, ಕಾರ್ತಿಕ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!