ಜಗಳೂರು : ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಡಿಎಸ್ ಎಸ್ ಮನವಿ

ಜಗಳೂರು : ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ  ಡಿಎಸ್ ಎಸ್ ಮನವಿ

ಜಗಳೂರು, ಡಿ.22- ಸಂಸತ್ ಕಲಾಪದಲ್ಲಿ ಸಂವಿಧಾನ ಶಿಲ್ಪಿ  ಡಾ.ಬಿ.ಆರ್.ಅಂಬೇಡ್ಕರ್ ಕುರಿತು  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಡಿಎಸ್ ಎಸ್ ನೇತೃತ್ವದಲ್ಲಿ ತಹಶೀಲ್ದಾರ್ ಮುಖಾಂತರ  ರಾಷ್ಟ್ರಪತಿಗೆ ಲಿಖಿತ  ಮನವಿ ಸಲ್ಲಿಸಲಾಯಿತು.

ಸಂವಿಧಾನದಡಿಯಲ್ಲಿ ಆಯ್ಕೆಯಾದ ಕೇಂದ್ರ ಸಚಿವರು ನೀಡಿರುವ ಹೇಳಿಕೆ ಖಂಡನೀಯ. ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಸುಮೋಟೋ ಕಾಯ್ದೆಯಡಿ  ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿಎಸ್ ಎಸ್  ಹಿರಿಯ ಮುಖಂಡ ಶಂಭುಲಿಂಗಪ್ಪ ಆಗ್ರಹಿಸಿದರು.

ಪ್ರಗತಿಪರ ಹೋರಾಟಗಾರ ವಕೀಲ ಆರ್. ಓಬಳೇಶ್ ಮಾತನಾಡಿ, ಅಂಬೇಡ್ಕರ್ ಅವರು ಶೋಷಿತ ವರ್ಗಗಳ ಹೃದಯ, ಜೀವಾಳವಾಗಿದ್ದು, ಅನುಯಾಯಿಗಳಾಗಿ ಪ್ರತಿನಿತ್ಯ ಅಂಬೇಡ್ಕರ್ ಅವರನ್ನು ಜಪ ಮಾಡುವಲ್ಲಿ ತಪ್ಪೇನಿದೆ?.ಇದನ್ನು ಸಹಿಸಲಾರದೆ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದ ಕೆಲ ಮೂಲಭೂತ ವಾದಿಗಳು ದೇವರು, ಧರ್ಮದ ಹೆಸರಿನಲ್ಲಿ ಜನತೆಯನ್ನು ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆ
ಒಕ್ಕೂಟದ ತಾಲ್ಲೂಕು ಅಧ್ಯಕ್ಷ ರಾಜಪ್ಪ, ಎಐವೈಎಫ್ ಮುಖಂಡ ಮಾದಿಹಳ್ಳಿ ಮಂಜುನಾಥ್, ದಲಿತ ಮುಖಂಡರಾದ ಮುನಿಯಪ್ಪ, ಭರಮಸಮುದ್ರ ಕುಮಾರ್, ಪಲ್ಲಾಗಟ್ಟೆ ರಂಗಪ್ಪ, ಮಲ್ಲೇಶ್, ತಿಪ್ಪೇಸ್ವಾಮಿ, ಹನುಮಂತಪ್ಪ, ನಿಂಗರಾಜ್, ಹನುಮಂತಪ್ಪ, ಯಲ್ಲಪ್ಪ, ಮಹಾಂತೇಶ್, ಶಿವಣ್ಣ, ಆಕನೂರು ನಿಂಗಪ್ಪ, ರಂಗಸ್ವಾಮಿ, ಉಮೇಶ್ ಸೇರಿದಂತೆ, ಮತ್ತಿತರರು ಭಾಗವಹಿಸಿದ್ದರು.

error: Content is protected !!