ದಾವಣಗೆರೆ, ಡಿ. 22- ನಗರ ದೇವತೆ ಶ್ರೀ ದುರ್ಗಾಂ ಬಿಕಾ ದೇವಿ ದೇವಸ್ಥಾನದಲ್ಲಿ ಕಡೇ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 24ರ ಮಂಗಳವಾರ ರಾತ್ರಿ 8.30 ಗಂಟೆಗೆ ನೆರವೇರಲಿದೆ. ಟ್ರಸ್ಟ್ನ ಗೌರವ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಕಾರ್ಯಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಾರ್ತಿಕೋತ್ಸವಕ್ಕೆ ಚಾಲನೆ ನೀಡುವರು.
ಅಂದು ಬೆಳಿಗ್ಗೆ 6 ಕ್ಕೆ ಶ್ರೀ ದುರ್ಗಾಂಬಿಕಾ ದೇವಿಗೆ ಪಂಚಾಮೃತ ಅಭಿಷೇಕ ನಂತರ ಬೆಳಿಗ್ಗೆ 9 ರಿಂದ ಹೂವಿನ ಹಾರದ ಮೆರವಣಿಗೆ ನಡೆಸಲಾಗುವುದು. ಬಾಳೆಯ ದಿಂಡಿನಿಂದ ಅಲಂಕೃತವಾದ ಕದಳಿ ಪೂಜೆಯೊಂದಿಗೆ ಈ ಸಾರಿಯ ಕಾರ್ತೀಕ ವಿಶೇಷವಾಗಿದ್ದು, ಸುಮಾರು 101 ದೀಪಗಳಿರುವ ಕಂಬಗಳಿಂದ ದೀಪೋತ್ಸವವು ಸರಳ ರೀತಿಯಲ್ಲಿ ನಡೆಯುತ್ತದೆ.