ಸೋದೆ ಶ್ರೀ ವಾದಿರಾಜ ಮಠದ ಶ್ರೀ ಗುರು ವಲ್ಲಭ ತೀರ್ಥ ಶ್ರೀಪಾದಂಗಳವರು ಇಂದು ನಗರಕ್ಕೆ ಸಂಜೆ 6.30 ಆಗಮಿಸಲಿದ್ದು, ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಿಂದ ವಿನೋಬನಗರ 1ನೇ ಮುಖ್ಯ ರಸ್ತೆಯಲ್ಲಿರುವ ನಲ್ಲೂರು ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನಕ್ಕೆ ಮೆರವಣಿಗೆ ಮೂಲಕ ಕರೆ ತರಲಾಗುವುದು.
ನಾಳೆ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ನಲ್ಲೂರು ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಏರ್ಪಾಡಾಗಿರುವ ಕಾರ್ಯಕ್ರಮದಲ್ಲಿ ಶ್ರೀಗಳವರ ಪಾದಪೂಜೆ, ಆಶೀರ್ವಚನ, ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಸೋದೆ ಶ್ರೀ ಗುರು ವಾದಿರಾಜ ಮಠದ ದೈವಜ್ಞ ಬ್ರಾಹ್ಮಣರ ಶಿಷ್ಯ ವೃಂದ ತಿಳಿಸಿದೆ.
ಭಕ್ತಾದಿಗಳು, ಸಮಾಜ ಬಾಂಧವರು ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಿಷ್ಯ ವೃಂದದ ನಲ್ಲೂರು ಎಸ್. ರಾಜಕುಮಾರ್ ಕೋರಿದ್ದಾರೆ.