ಕೆರೆ, ನದಿ, ತೊರೆಗಳು ನಿಸರ್ಗದತ್ತ ಜೀವಸೆಲೆಗಳು. ಅಸಂಖ್ಯಾತ ಜೀವಿಗಳು ನೀರಿನಿಂದಲೇ ಉಗಮಗೊಂಡಿವೆ. ದಾವಣಗೆರೆ ನಗರದ ಕುಂದುವಾಡ ಕೆರೆ ಒಂದು ನೈಸರ್ಗಿಕ ತಾಣವಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಲುಗಿದ್ದ ಕೆರೆ ನಿಧಾನವಾಗಿ ಮತ್ತು ನಿರ್ದಿಷ್ಟವಾಗಿ ತನ್ನ ಗತವೈಭವಕ್ಕೆ ಮರಳುತ್ತಿದೆ. ಇಂದು ಪಕ್ಷಿ ವೀಕ್ಷಣೆಗೆ ತೆರಳಿದಾಗ ಮೂರು ವಿದೇಶಿ ಪಕ್ಷಿಗಳ ಪ್ರಭೇದಗಳು ಸೇರಿದಂತೆ 46 ಪ್ರಭೇದದ ಪಕ್ಷಿಗಳು ಜಲಕ್ರೀಡೆಯಾಡುತ್ತಿರುವುದು ಕಂಡುಬಂದಿತು. ಯೂರೋಪಿನ ನಾರ್ದರನ್ ಶೋವರ್ ಚಳಿಗಾಲದ ವಲಸೆಗಾರ ಹಕ್ಕಿಗಳು ಕಂಡು ಬಂದವು. ಕಳೆದ ನಾಲ್ಕು ವರ್ಷಗಳಲ್ಲಿ ಕುಂದುವಾಡ ಕೆರೆಯಲ್ಲಿ ಕಾಣದಿದ್ದ ಈ ಹಕ್ಕಿಗಳು ಕೇವಲ ಐದು ಈ ವರ್ಷ ಕಂಡು ಬಂದಿರುವುದು ಶುಭ ಸೂಚನೆ. ಹಾಗೆಯೇ ಬಿಳಿ ಬಾತುಗಳು 40 ರಷ್ಟಿದ್ದವು. ಒಂದೇ ಒಂದು ಗುಬುಟು ಕೊಕ್ಕಿನ ಬಾತು ಕಾಣಿಸಿದ್ದು ವಿಶೇಷವೇ ಸರಿ. ಹಾಗೆಯೇ ಮಧ್ಯದ ದ್ವೀಪದಲ್ಲಿರುವ ಮರಗಳಲ್ಲಿ ನೂರಾರು ನೀರು ಕಾಗೆಗಳು ಗೂಡು ಕಟ್ಟಿರುವುದು ಕುಂದುವಾಡ ಕೆರೆಗೆ ಮೆರಗು ತಂದಿವೆ. ಮಾನವನ ದಬ್ಬಾಳಿಕೆ ವಿರುದ್ಧ ಪ್ರಕೃತಿ ಪುಟಿದೇಳು ವುದು ಸಾಮಾನ್ಯ. ಹಾಗೆಯೇ ಕುಂದುವಾಡ ಕೆರೆ ನಿಧಾನ ವಾಗಿ ತನ್ನ ಗತವೈಭವಕ್ಕೆ ಮರಳುತ್ತಿರುವುದು ಸಮಾಧಾನ ಕರ ಸಂಗತಿ. ಅಂತಯೇ ಪ್ರಕೃತಿದತ್ತ ಕೆರೆಯನ್ನು ನೈಸರ್ಗಿಕ ವಾಗಿ ಉಳಿಸಿಕೊಂಡರೆ ನಗರ-ನಾಡು ಉಳಿಯುವುದು.
ಚಿತ್ರ ಬರಹ: ಡಾ. ಎಸ್. ಶಿಶುಪಾಲ ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ, ಮೊ.:8792674905, ಇಮೇಲ್: [email protected]