ದಾವಣಗೆರೆ, ಡಿ. 20- ನಗರದ ಶ್ರೀ ವೀರ ಮದಕರಿ ನಾಯಕ ವೃತ್ತ (ಹೊಂಡದ ಸರ್ಕಲ್) ದ ಬಳಿಯ ಸ್ವಕುಳಸಾಳಿ ಸಮಾಜದ ಶ್ರೀ ಜಿವ್ಹೇಶ್ವರ ಧ್ಯಾನ ಮಂದಿರದಲ್ಲಿ ಸ್ವಕುಳಸಾಳಿ ಸಮಾಜದ ಮಹಿಳಾ ಮಂಡಳಿ ವತಿಯಿಂದ ನಾಡಿದ್ದು ದಿನಾಂಕ 23ರ ಸೋಮವಾರ ಸಂಜೆ 5.30ಕ್ಕೆ ಶ್ರೀ ಜಿಹ್ವೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ. ಸಮಾಜ ಬಾಂಧವರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸುಜಾತ ರೋಖಡೆ ಕೋರಿದ್ದಾರೆ.
December 21, 2024