ದಾವಣಗೆರೆ, ಡಿ.18- ಕೆ.ಟಿ.ಜೆ. ನಗರ 3ನೇ ಮುಖ್ಯ ರಸ್ತೆ, 11 ಮತ್ತು 12ನೇ ಕ್ರಾಸ್‌ನ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 20ರ ಶುಕ್ರವಾರ ಸಂಜೆ 7.15ಕ್ಕೆ ಶ್ರೀ ತುಳಜಾ ಭವಾನಿ ದೇವಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ.
ಸರ್ವ ಭಕ್ತಾದಿಗಳು ತನು, ಮನ, ಧನಗಳನ್ನು ಅರ್ಪಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.